ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಜಪಾನ್‌ನಲ್ಲಿ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡ ಮಂದಿ ಇದೀಗ ಪಪುವಾ ನ್ಯೂಗಿನಿಯಾಗೆ ಬಂದಿಳಿದಿದ್ದಾರೆ. ಮೋದಿ ಆಗಮನದಿಂದ ಪಪುವಾ ನ್ಯೂಗಿನಿಯಾ ಪುಟ್ಟ ದೇಶ ಪುಳಕಿತಗೊಂಡಿದೆ.
ಶಿಷ್ಟಾಚಾರ ಬದಿಗೊತ್ತಿ ಪ್ರಧಾನಿ ಮೋದಿಗೆ ಪಪುವಾ ನ್ಯೂಗಿನಿಯಾ ಭರ್ಜರಿ ಸ್ವಾಗತ ನೀಡಿದೆ. ವಿಮಾನದಿಂದ ಇಳಿದು ಬಂದ ಮೋದಿಯನ್ನು ಸ್ವಾಗತಿಸಿದ ಪಪುವಾ ಪ್ರಧಾನಿ ಜೇಮ್ಸ್ ಮರಾಪೆ, ಮೋದಿ ಕಾಲಿಗೆರಗಿದ ಘಟನೆ ನಡೆದಿದೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಮೋದಿ ಜನಪ್ರೀಯತೆ ಹಾಗೂ ಮೋದಿ ಭೇಟಿಯಿಂದ ಇಡೀ ದೇಶವೇ ಯಾವ ಪರಿ ಪುಳಕಿತಗೊಂಡಿದೆ ಅನ್ನೋದು ಸೂಚ್ಯವಾಗಿ ಹೇಳುತ್ತಿದೆ.
ಪ್ರಧಾನಿ ಮೋದಿ ವಿಮಾನ ಪಪುವಾ ನ್ಯೂಗಿನಿಯಾ ದೇಶದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಪಪುವಾ ನ್ಯೂಗಿನಿ ಪ್ರಧಾನಿ ಜೇಮ್ಸ್ ಮರಾಪೆ ಸೇರಿದಂತೆ ಪ್ರಮುಖ ನಾಯಕರು ಸ್ವಾಗತಕ್ಕಾಗಿ ಕಾದು ಕುಳಿತಿದ್ದರು. ಮೋದಿ ಆಗಮಿಸುತ್ತಿದ್ದಂತೆ ಆಲಂಗಿಸಿ ಆತ್ಮೀಯ ಸ್ವಾಗತ ಕೋರಿದ್ದಾರೆ.ಬಳಿಕ ಪ್ರಧಾನಿ ಮೋದಿ ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಪ್ರಧಾನಿ ಮೋದಿ ಕಾಲಿಗೆ ಎರಗುತ್ತಿದ್ದಂತೆ ಮೋದಿ ತಡೆದಿದ್ದಾರೆ. ಆದರೆ ಜೇಮ್ಸ್ ಮರಾಪೆ ಆಶೀರ್ವಾದ ಪಡೆದಿದ್ದಾರೆ. ಜೇಮ್ಸ್ ಮರಾಪೆಯನ್ನು ಆತ್ಮೀಯವಾಗಿ ಆಲಿಂಗಿಸಿದ ಮೋದಿ ಶುಭಾಶಯ ವಿನಿಮಯ ಮಾಡಿದ್ದಾರೆ.
ಪಪುವಾ ನ್ಯೂಗಿನಿಯಾದಲ್ಲಿ ಸೂರ್ಯ ಮುಳುಗಿದ ಮೇಲೆ ಯಾವುದೇ ವಿದೇಶಿ ಆತಿಥಿಗಳನ್ನು ಸ್ವಾಗತಿಸುವುದಿಲ್ಲ. ಇದು ಪಪುವಾ ನ್ಯೂಗಿನಿಯಾ ದೇಶದ ಸಂಪ್ರದಾಯ. ಆದರೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ ಅನ್ನೋ ಕಾರಣಕ್ಕೆ ಈ ಎಲ್ಲಾ ಶಿಷ್ಟಾಚಾರವನ್ನು ಬದಿಗೊತ್ತಿ ಸ್ವಾಗತ ಕೋರಲಾಗಿದೆ. ಪ್ರಧಾನಿ ಮೋದಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತೇವೆ ಎಂದು ಪ್ರಧಾನಿ ಜೇಮ್ಸ್ ಮರಾಪೆ ಹೇಳಿದ್ದರು. ಇದರಂತೆ 19 ಸುತ್ತಿನ ಕುಶಾಲತೋಪು ಸಿಡಿಸಿ, ಅದ್ಧೂರಿಯಾಗಿ ಮೋದಿಯನ್ನು ಸ್ವಾಗತಿಸಲಾಗಿದೆ.