ಮಾಜಿ ಶಾಸಕ ಯು.ಆರ್ ಸಭಾಪತಿ ನಿಧನ

ಸಮಗ್ರ ನ್ಯೂಸ್: ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ಶಾಸಕ ಯು.ಆರ್. ಸಭಾಪತಿ(71) ಅಲ್ಪಕಾಲದ ಅಸೌಖ್ಯದಿಂದ ಇದ್ದ ಇವರು ಉಡುಪಿಯ ಬಡಗುಪೇಟೆಯ ತಮ್ಮ ಮನೆಯಲ್ಲಿ ಇಂದು ನಿಧನರಾಗಿದ್ದಾರೆ.

Ad Widget ... ..

1952 ರಲ್ಲಿ ಹುಟ್ಟಿದ ಅವರು, 1994 ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ(ಕೆಸಿಪಿ) ಚುನಾಯಿತರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಅನಂತರ ಕೆಸಿಪಿ ಕಾಂಗ್ರೆಸ್ ನೊಂದಿಗೆ ವಿಲೀನಗೊಂಡಿತ್ತು. 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಎಂಎಲ್ ಎ ಆಗಿ ಮರು ಆಯ್ಕೆಯಾಗಿದ್ದರು. ಅನಂತರ ಜಿಲ್ಲೆಯ ರಾಜಕಾರಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.

Ad Widget

ಮೃತರು ಪತ್ನಿ, ಎರಡು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *