Ad Widget .

ಐಪಿಎಲ್ 2023 ನೆ ಪ್ಲೇ ಆಫ್ ಪ್ರವೇಶ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಸಿಕ್ಕಿದೆ ಅವಕಾಶ

ಸಮಗ್ರ ನ್ಯೂಸ್: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಈಗಾಗಲೇ ಎರಡು ತಂಡಗಳು ಎಂಟ್ರಿ ಕೊಟ್ಟಿದ್ದು. ಗುಜರಾತ್ ಟೈಟಾನ್ಸ್ ಮತ್ತು ಚೆನೈ ಉಳಿದಂತೆ ಎರಡು ಸ್ಥಾನಕ್ಕೆ ಮೂರು ತಂಡಗಳ ನಡುವೆ ಪೈಪೋಟಿ ಆರಂಭವಾಗಿದೆ . ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧ 2023 ರ 66 ನೇ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಜಯದೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್‌ ಪ್ಲೇ ಆಫ್‌ ನಲ್ಲಿ ಉಳಿದುಕೊಂಡಿದೆ.

Ad Widget . Ad Widget .

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಲೀಗ್‌ ಹಂತದ ಪಂದ್ಯಗಳು ಕೊನೆ ಹಂತವನ್ನು ತಲುಪಿದ್ದು. ರಾಜಸ್ಥಾನ ರಾಯಲ್ಸ್‌ ತಂಡ ಲೀಗ್‌ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನು ಆಡಿದ್ದು, 7 ಪಂದ್ಯಗಳಲ್ಲಿ ಜಯ ಗಳಿಸಿದೆ , 7 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ರಾಜಸ್ಥಾನ ರಾಯಲ್ಸ್‌ ತಂಡ 14 ಅಂಕ ಗಿಟ್ಟಿಸಿಕೊಂಡಿದೆ . ಆದರೆ ಮುಂಬೈ, ಬೆಂಗಳೂರು, ಲಕ್ನೋ ತಂಡಗಳ ಸೋಲು ಗೆಲುವು ರಾಜಸ್ಥಾನ ತಂಡದ ಮುಂದಿನ ಹಂತದ ಭವಿಷ್ಯ ನಿರ್ಧಾರ ಮಾಡಲಿವೆ.

Ad Widget . Ad Widget .

ಸದ್ಯ ಮೂರು ಸ್ಥಾನಗಳಿಗೆ ಬಾರೀ ಪೈಪೋಟಿ ಇದ್ದು ಕೋಲ್ಕತ್ತಾ ವಿರುದ್ದ ನಡೆಯುವ ಪಂದ್ಯದಲ್ಲಿ ಲಕ್ನೋ ತಂಡ ಪ್ಲೇ ಆಫ್‌ ಪ್ರವೇಶಿಸುವುದು ಗ್ಯಾರಂಟಿ . ಇನ್ನು ರಾಜಸ್ಥಾನ ತಂಡಕ್ಕೆ ಬೆಂಗಳೂರು ಹಾಗೂ ರಾಜಸ್ಥಾನ್ ತಂಡದ ಗೆಲುವು ಸೋಲು ಮಹತ್ವದ್ದಾಗಿದೆ. ಒಂದೊಮ್ಮೆ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳು ಮುಂದಿನ ಪಂದ್ಯದಲ್ಲಿ ಗೆದ್ದರೆ ಗರಿಷ್ಠ ನೆಟ್ ರನ್ ರೇಟ್ ಹೊಂದಿರುವ ತಂಡ ಟಾಪ್-4ರಲ್ಲಿ ಸ್ಥಾನ ಪಡೆಯುತ್ತದೆ . ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಗೆದ್ದರೆ ಮತ್ತು ಗುಜರಾತ್ ಟೈಟಾನ್ಸ್ ಆರ್‌ಸಿಬಿಯನ್ನು ಸೋಲಿಸಿದರೆ, ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್‌ಗೆ ಪ್ರವೇಶಿಸುವ ಅವಕಾಶವನ್ನು ಪಡೆಯುತ್ತದೆ.

ಈಗಿನ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಗೆ ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ತಂಡಗಳ ಮಧ್ಯೆ ನಡೆಯುವ ಮುಂದಿನ ಪಂದ್ಯಗಳ ಫಲಿತಾಂಶ ಅತ್ಯಂತ ಮುಖ್ಯವಾಗಿದೆ. ಇಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತರೆ ರಾಜಸ್ಥಾನ ರಾಯಲ್ಸ್ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯವನ್ನು ಕಾಯಬೇಕಾಗುತ್ತದೆ.

ಏಕೆಂದರೆ ಮುಂದಿನ ಪಂದ್ಯದಲ್ಲಿ ಮುಂಬೈ ಸೋತರೆ ರಾಜಸ್ಥಾನ್ ರಾಯಲ್ಸ್ ಗೆ ಗುಜರಾತ್ ಟೈಟಾನ್ಸ್ ಜಯ ಸಾಧಿಸಬೇಕು.. ಆರ್‌ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್ 6 ರನ್ ಅಥವಾ 4 ಎಸೆತಗಳು ಬಾಕಿ ಇರುವಂತೆಯೇ ಗೆದ್ದರೆ, ರಾಜಸ್ಥಾನ್ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಲಿದೆ. ಇದರಿಂದಾಗಿ ರಾಜಸ್ಥಾನ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡದ ಸೋಲನ್ನು ಎದುರು ನೋಡುತ್ತಿದೆ. ಈ ವೇಳೆ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್‌ಗೆ ಅಚ್ಚರಿ ಮೂಡಿಸಲಿದೆ.

Leave a Comment

Your email address will not be published. Required fields are marked *