ಶೃಂಗೇರಿ ಸಮೀಪ ತುಂಗೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಸಮಗ್ರ ನ್ಯೂಸ್: ಶೃಂಗೇರಿ ಸಮೀಪದ ನೆಮ್ಮಾರು ಎಂಬಲ್ಲಿ ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

Ad Widget ... ..

ಮೃತರು ಹರಿಹರಪುರದ ರಕ್ಷಿತ್ ಮತ್ತು ಶೃಂಗೇರಿಯ ಸುಂಕದ ಮಕ್ಕಿಯ ಪ್ರಜ್ವಲ್ ಎನ್ನುವವರಾಗಿದ್ದಾರೆ. ರಕ್ಷಿತ್ ಹಾಗೂ ಪ್ರಜ್ವಲ್ ಶೃಂಗೇರಿಯ ಖಾಸಗಿ ಕಾಲೇಜಿನ 14 ವಿದ್ಯಾರ್ಥಿಗಳೊಂದಿಗೆ ಈಜಲು ತೆರಳಿದ್ದರು.

Ad Widget

ರಕ್ಷಿತ್ ನೀರಿನಲ್ಲಿ ಸಿಲುಕಿಕೊಂಡಿದ್ದಾಗ ಪ್ರಜ್ವಲ್‌ ಆತನ ರಕ್ಷಣೆಗೆ ತೆರಳಿದ್ದು ಆತನೂ ನೀರು ಪಾಲಾಗಿದ್ದಾನೆ ಎಂದು ತಿಳಿದು ಬಂದಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *