Ad Widget .

ಪುತ್ತೂರು: ಅಜಿತ್ ರೈ ಹೊಸಮನೆ ಅವರನ್ನು ತಳ್ಳಿ ಹೊರ ಹಾಕಿದ್ರ ಹಿಂದೂ ಕಾರ್ಯಕರ್ತರು?

ಸಮಗ್ರ ನ್ಯೂಸ್: ಬ್ಯಾನರ್ ಅಳವಡಿಕೆ ನಂತರ ಪುತ್ತೂರಿನಲ್ಲಿ ಗಂಭೀರ ನಾಟಕವೇ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿದ್ದು ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದ್ದು, ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತಿದೆ.

Ad Widget . Ad Widget .

ಈ ಸಮಯದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿಗೆ ಆಗಮಿಸಿ ಅರುಣ್ ಕುಮಾರ್ ಪುತ್ತಿಲ ಅವರೊಂದಿಗೆ ಹಲ್ಲೆಗೊಳಗಾದವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಈ ನಡುವೆ ಬಿಜೆಪಿಯ ಅಜಿತ್ ರೈ ಹೊಸಮನೆಯನ್ನು ಹಿಂದೂ ಕಾರ್ಯಕರ್ತರು ತಳ್ಳಿ ಹೊರಹಾಕಿದ ಘಟನೆ ನಡೆದಿದೆ.

Ad Widget . Ad Widget .

ಈ ಹಿಂದೆ ಹಿಂದೂ ಜಾಗರಣ ವೇದಿಕೆಯಲ್ಲಿ ಗುರುತಿಸಿಕೊಂಡ ಅಜಿತ್ ರೈ ಹೊಸಮನೆ ಅವರು ಫೋಟೊ ಕ್ಲಿಕ್ಕಿಸಲೆಂದು ಒಳಬಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಹಿಂದೂ ಕಾಯಕರ್ತರು ಅವರನ್ನು ತಡೆದು, ತಳ್ಳಿ ಹೊರ ಹಾಕಿರುವ ಘಟನೆ ವರದಿಯಾಗಿದೆ. ಈ ಹಿಂದೆ ಪುತ್ತೂರಿನಲ್ಲಿ ಆದ ಬೆಳವಣಿಗೆಯನ್ನು ಜೊತೆಯಲ್ಲೇ ಇದ್ದುಕೊಂಡು ಪ್ರತಿಯೊಂದು ಮಾಹಿತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್ ಕಟೀಲ್ ಅವರಿಗೆ ರವಾನಿಸಿದ್ದಾರೆ ಎಂಬ ಅನುಮಾನದಿಂದ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಹೊರ ಹಾಕಿದ್ದಾರೆ. ಅಜಿತ್ ರೈ ಒಬ್ಬ ನಕಲಿ ಹಿಂದೂ ಮತ್ತು ಸ್ವಾರ್ಥಿ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ತಾಂಡವಾಡುತ್ತಿದೆ.

Leave a Comment

Your email address will not be published. Required fields are marked *