ಸಮಗ್ರ ನ್ಯೂಸ್: ಸುಳ್ಯದ ಕೋಲ್ಚಾರು ಕುಟುಂಬದ ತರವಾಡು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಇಂದು ಮತ್ತು ನಾಳೆ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಭಕ್ತಿ ಸಂಭ್ರಮದಿಂದ ನಡೆಯಲಿರುವುದು.

ಇಂದು(ಮೇ. 17) ಸಂಜೆ ಶ್ರೀ ದೈವಗಳ ವೆಳ್ಳಾಟಂ ನಡೆಯಲಿದ್ದು ನಾಳೆ ಬೆಳಗ್ಗೆ ದೈವದ ಉತ್ಸವ ನಡೆಯಲಿರುವುದು. ನಾಳೆ ಸಂಜೆ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶವಾಗಿ ಸೂಟೆ ಸಮರ್ಪಣೆಯಾಗಲಿದೆ. ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯಲಿದೆ.

ಕೋಲ್ಚಾರು ದೈವಸ್ಥಾನದಲ್ಲಿ ಸುಮಾರು 54 ವರ್ಷಗಳ ನಂತರ ನಡೆಯಲಿರುವ ಅಪರೂಪದ ದೈವಂಕಟ್ಟು ಮಹೋತ್ಸವಕ್ಕೆ ಊರಿಗೆ ಊರೇ ಸಜ್ಜಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ರಾಜ್ಯದ ಹಾಗೂ ಹೊರರಾಜ್ಯದಿಂದ ಆಗಮಿಸುವ ನಿರೀಕ್ಷೆಯಲಿದ್ದು ಸಕಲ ಸರ್ವ ಸಿದ್ಧತೆ ಮಾಡಲಾಗಿದೆ.