Ad Widget .

ಸಾವಿರ ಕವಿತೆಗಳ ಸರದಾರ ಈ ವಾರದ ವೀಕೆಂಡ್ ವಿತ್ ರಮೇಶ್ ಜೊತೆ

ಅವರು ಯಾರು ಗೊತ್ತಾ?

Ad Widget . Ad Widget .

ಸಮಗ್ರ ನ್ಯೂಸ್:ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರನ್ನು ಕಾಣಬಹುದಾಗಿದೆ.

Ad Widget . Ad Widget .

ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾವಿರಾರು ಕವಿತೆಗಳನ್ನು, ಚಲನಚಿತ್ರ ಹಾಡುಗಳನ್ನು ಬರೆದ ಕನ್ನಡ ನಾಡಿನ ಹೆಮ್ಮೆಯ ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಅವರ ಜೀವನಗಾಥೆಯನ್ನು ನೋಡಬಹುದಾಗಿದೆ.

ಅವರು ಬಯಸಿದ, ಅದೇ ನನ್ನ ವೃತ್ತಿಯಾಗಿ ಸಿಕ್ಕಿರುವುದು ನನ್ನ ಅದೃಷ್ಟ. ನನಗೆ ಖುಷಿ ಇದೆ ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಾಗೇಂದ್ರ ಪ್ರಸಾದ್ ಅವರು ಹೇಳಿದ್ದಾರೆ. ಕನ್ನಡಕ್ಕೆ ಒಂದು ಶಕ್ತಿ ಇದೆ. ಅದು ಈ ಕಾಲದ ಜನರೇಶನ್ ಗೆ ಗೊತ್ತಾಗ್ತಾ ಇಲ್ಲ. ಮುಂದೆ ಗೊತ್ತಾಗುತ್ತೆ ಎಂದು ಕಾರ್ಯಕ್ರಮಕ್ಕೆ ಬಂದ ನಾಗೇಂದ್ರ ಪ್ರಸಾದ್ ಅವರ ಸ್ನೇಹಿತರು ಹೇಳಿದ್ದಾರೆ. ರಮೇಶ್ ಅವರು ಹಾಡುಗಳು ಹೇಗೆ ಹುಟ್ಟಿಕೊಳ್ತವೆ ಎಂದು ಕೇಳಿದಾಗ 5 ನಿಮಿಷ ಟೈಮ್ ಕೊಡಿ ಎಂದು ಹೇಳುತ್ತಾ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಬಗ್ಗೆ ಹಾಡು ಬರೆದಿದ್ದಾರೆ. ನಾನು ಕೂರಬೇಕಾದ ಸ್ಥಳದಲ್ಲಿ ನಾಗೇಂದ್ರ ಪ್ರಸಾದ್ ಕೂರಬೇಕು ಎಂದು ಈ ಹಿಂದೆ ಹಂಸಲೇಖ ಅವರು ಹೇಳಿದ್ದನ್ನು ನೆನೆದು ನಾಗೇಂದ್ರ ಪ್ರಸಾದ್ ಅವರು ಭಾವುಕರಾಗಿದ್ದಾರೆ.

ವಿ. ನಾಗೇಂದ್ರ ಪ್ರಸಾದ್ ಬರೆದ ಈ ಟಚ್ಚಲಿ ಏನೋ ಇದೆ, ಹಾಗೂ ಕಣ್ ಕಣ್ಣ ಸಲಿಗೆ ಮುಂತಾದ ಅಸಂಖ್ಯಾತ ಹಾಡುಗಳ ಮೂಲಕ ಕನ್ನಡ ಚಿತ್ರಪ್ರೇಕ್ಷಕರ ಮನಗೆದ್ದಿದ್ದಾರೆ. ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿನ 1000 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿರುವ ನಾಗೇಂದ್ರ ಪ್ರಸಾದ್, ‘ಸತ್ಯ’ ಚಿತ್ರದ’ ‘ಹುಟ್ಟು ಎರಡಕ್ಷರ’ ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದವರು. ದೀಪಕ್ ನಟನೆಯ ‘ಶಿಷ್ಯ’ ಹಾಗೂ ‘ಅಂಬಿ’ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ನಲ್ಲ’ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸೂಪರ್ ಹಿಟ್ ‘ಶ್ರೀ ಮಂಜುನಾಥ’ ಚಿತ್ರಕ್ಕೆ ಸಂಭಾಷಣೆಯ ಬರಹಗಾರರಾಗಿದ್ದಾರೆ.

Leave a Comment

Your email address will not be published. Required fields are marked *