ಕಟ್ಟಡದಿಂದ ಬಿದ್ದು ಪೊಲೀಸ್ ಅಧಿಕಾರಿ ಸಾವು

ಸಮಗ್ರ ನ್ಯೂಸ್ : ಕರ್ತವ್ಯದಲ್ಲಿದ್ದಾಗ ಕಟ್ಟಡದಿಂದ ಬಿದ್ದು ಪೊಲೀಸ್ ಅಧಿಕಾರಿ ಸಾವನ್ನಪ್ಪಿದ ದುರದೃಷ್ಟಕರ ಘಟನೆ ಕೊಟ್ಟಾಯಂನ ಪಾಲಾದಲ್ಲಿ ನಡೆದಿದೆ.

Ad Widget ... ..

ಮೃತರನ್ನು ರಾಮಪುರಂ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕುರವಿಲಂಗಾಡ್ ಮೂಲದ ಜೋಬಿ ಜಾರ್ಜ್ ಎಂದು ಗುರುತಿಸಲಾಗಿದೆ. ರಾಮಪುರಂನ ಬಸ್ ಡಿಪೋ ಬಳಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ ಈ ಪ್ರದೇಶದಲ್ಲಿ ಜೂಜಾಟದ ಗ್ಯಾಂಗ್ ಇದೆ ಎಂಬ ಮಾಹಿತಿಯ ಮೇರೆಗೆ ಜಾರ್ಜ್ ಕಟ್ಟಡಕ್ಕೆ ಆಗಮಿಸಿದ್ದರು. ಆದರೆ ಅಧಿಕಾರಿ ಕಾರಿಡಾರ್ ನಲ್ಲಿ ಜಾರಿದ ಪರಿಣಾಮ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ.

Ad Widget

ಈ ವೇಳೆ ಕೂಡಲೇ ಅವರನ್ನು ಸಹೋದ್ಯೋಗಿಗಳು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Leave a Comment

Your email address will not be published. Required fields are marked *