ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಕೋಲ್ಚಾರು ತರವಾಡು ಕುಟುಂಬದ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಕಟ್ಡು ಮಹೋತ್ಸವದ ಹಿನ್ನಲೆ ಭಕ್ತಿ ಸಡಗರದಿಂದ ಹಸಿರುವಾಣಿ ಮೆರವಣಿಗೆ ಸಾಗಿಬಂದಿತು.
ಇಂದು(ಮೇ.16) ಬೆಳಿಗ್ಗೆ ಗಂಟೆ 8.30 ರಿಂದ ಕೋಲ್ಟಾರು ಐನ್ ಮನೆಯಿಂದ ಮತ್ತು ಶ್ರೀ ಶಾರದಾಂಬಾ ಭಜನಾ ಮಂದಿರದ ಬಳಿಯಿಂದ ಹಸಿರುವಾಣಿ ಮೆರವಣಿಗೆಯಲ್ಲಿ ನೂರಾರು ವಾಹನಗಳೊಂದಿಗೆ ಸಾಗಿ ಬಂದು ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅದ್ಯಕ್ಷ ಪುರುಷೋತ್ತಮ ಕೋಲ್ಚಾರು ಶ್ರೀ ತಂಬುರಾಟಿ ಭಗವತಿ ಕ್ಷೇತ್ರ ಕುತ್ತಿಕೋಲು ಆಡಳಿತ ಮಂಡಳಿ ಅಧ್ಯಕ್ಷ ಕುಂಞಿಕಣ್ಣ ಬೇಡಗ, ದೈವಂಕಟ್ಟು ಉತ್ಸವ ಸಮಿತಿ ಅಧ್ಯಕ್ಷ ಭಗೀರಥ ಕೋಲ್ಚಾರು, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಚಂದ್ರ ಕೋಲ್ಚಾರು, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಬಲ್ಯಾಡಿ, ಕುಟುಂಬದ ಯಜಮಾನ ಕೂಸಪ್ಪ ಗೌಡ ಕೋಲ್ಚಾರು ,ಸಂಚಾಲಕರಾದ ಸೋಮಶೇಖರ ಕೊಯಿಂಗಾಜೆ, ಜಯಪ್ರಕಾಶ್ ಕುಂಚಡ್ಕ ಉಪಾಧ್ಯಕ್ಷರುಗಳಾದ, ರೂಪಾನಂದ ಕೋಲ್ಚಾರು , ಶಿವಣ್ಣ ಕೋಲ್ಚಾರು, ಶ್ಯಾಮ ಸುಂದರ ಕೋಲ್ಚಾರು ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಕೋಲ್ಚಾರು
ಕೋಶಾಧಿಕಾರಿ ಶಿವಪ್ರಸಾಧ್ ಕೋಲ್ಚಾರು, ಆಡಳಿತ ಸಮಿತಿ ಕಾರ್ಯದರ್ಶಿ ರಾಮಪ್ಪ ಮಾಸ್ತರ್ ಕೋಲ್ಚಾರು, ಆಡಳಿತ ಸಮಿತಿ ಕೋಶಾಧಿಕಾರಿ ಮಾಧವ ಗೌಡ ಕೋಲ್ಚಾರು, ಶ್ರಿ ತಂಬುರಾಟಿ ಭಗವತಿ ಆಲೆಟ್ಟಿ ಪ್ರಾದೇಶಿಕ ಸಮಿತಿ ಅದ್ಯಕ್ಷ ನಾರಾಯಣ ಬಾರ್ಪಣೆ, ಸ್ಥಾನದ ಮನೆ ಅರ್ಚಕ ದಾಮೋದರ, ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ ಕೋಲ್ಚಾರು, ಕಾರ್ಯದರ್ಶಿ ನಾಗವೇಣಿ ಕೋಲ್ಚಾರು, ಖಜಾಂಜಿ ಗೋವರ್ಧಿನಿ ಕೋಲ್ಚಾರು, ಹಾಗೂ ಉಪಸಮಿತಿಗಳ ಸದಸ್ಯರುಗಳು, ಕೋಲ್ಚಾರು ಕುಟುಂಬಸ್ಥರು ಆಲೆಟ್ಟಿ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಾಗವಹಿಸಿದರು.

ಮೇ.17ರಂದು ಶ್ರೀ ದೈವಗಳ ತೊಡಂಙಲ್, ವೆಳ್ಳಾಟಂ ನಡೆಯಲಿದೆ. ಬಳಿಕ ಕೈವೀದು ನಡೆದು ಮೇ.18ರಂದು ಕಾರ್ನೋನ್, ಕೋರಚ್ಚನ್, ವಿಷ್ಣುಮೂರ್ತಿ, ವಯನಾಟ್ ಕುಲವನ್ ದೈವಗಳ ದೈವಂಕಟ್ಟು ಮಹೋತ್ಸವ ನಡೆಯಲಿದೆ.