Ad Widget .

ಬೆಳ್ತಂಗಡಿ: ಗೃಹಿಣಿಯ ಮಾನಭಂಗಕ್ಕೆ ಯತ್ನ

ಸಮಗ್ರ ನ್ಯೂಸ್: ಕೆಲಸ ಕೊಡಿಸುವ ನೆಪದಲ್ಲಿ ಗೃಹಿಣಿಯೊಬ್ಬರನ್ನು ಮಾನಭಂಗಕ್ಕೆ ಯತ್ನಿಸಿದ ಘಟನೆ ಮೇ 14ರಂದು ಉಜಿರೆಯಲ್ಲಿ ನಡೆದಿದೆ.

Ad Widget . Ad Widget .

ಉಜಿರೆಯ ಉದ್ಯಮಿ ಪ್ರಭಾಕರ ಹೆಗ್ಡೆ ಕೃತ್ಯ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ . ಚಿಕ್ಕಮಗಳೂರು ಜಿಲ್ಲೆಯ ಹಂಗರವಳ್ಳಿ ನಿವಾಸಿ ಸುಜಾತಾ ದೂರು ನೀಡಿದವರು.
ಸುಜಾತಾ ಮತ್ತು ಅವರ ಪತಿ ಕಿರಣ್‌ ಗೌಡ ಅವರು ಪ್ರಭಾಕರ್‌ ಹೆಗ್ಡೆ ಅವರ ಸಂಸ್ಥೆಗೆ ಕೆಲಸ ಹುಡುಕಿಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಅವರ ಮನೆಯಲ್ಲೇ ಆಶ್ರಯ ನೀಡಿ ಮೇ 14ರಂದು ಪತಿ ಕಿರಣ್‌ ಅವರನ್ನು ತಮ್ಮ ಸಂಸ್ಥೆಯ ಅಡುಗೆ ಕೆಲಸಕ್ಕೆ ನಿಯೋಜಿಸಿದರು. ಸುಜಾತಾ ಅವರಿಗೆ ಧರ್ಮಸ್ಥಳದ ತಮ್ಮದೇ ಸಂಸ್ಥೆಯಲ್ಲಿ ಕೆಲಸ ನೀಡುವಂತೆ ಹಾಗೆ ತಾನೇ ಖುದ್ದಾಗಿ ಬಿಟ್ಟು ಬರುವುದಾಗಿ ಹೇಳಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋಗಿದ್ದರು. ಆದರೆ ಕಾರು ಧರ್ಮಸ್ಥಳ ಕಡೆಗೆ ಹೋಗದೆ ಕಕ್ಕಿಂಜೆ ಮಾರ್ಗವಾಗಿ ತೆರಳಿದ್ದಾರೆ.

Ad Widget . Ad Widget .

ಈ ವೇಳೆ ಸುಜಾತಾರಿಗೆ ಅನುಮಾನ ಬಂದು ಈ ಬಗ್ಗೆ ಪ್ರಶ್ನಿಸಿದಾಗ, ನಿನ್ನ ಪತಿಗೆ ಕೆಲಸ ಕೊಡಿಸಿದ್ದೇನೆ ಎಂದು ಹೇಳಿ ಅವಮಾನಕರವಾಗಿ ವರ್ತಿಸಿದ್ದು, ಅಲ್ಲದೇ ಸುಜಾತಾ ಅವರ ಮಾನಭಂಗಕ್ಕೆ ಪ್ರಯತ್ನಿಸಿದ್ದಾರೆ. ಈ ವೇಳೆ ಜೋರಾಗಿ ಕಿರುಚಾಡಿದಾಗ ಸ್ಥಳೀಯರು ಅಲ್ಲಿಗೆ ಬರುವುದನ್ನು ಕಂಡು ಆರೋಪಿಯು ಕಾರನ್ನು ಮುಂದಕ್ಕೆ ಕೊಂಡೊಯ್ದು ಸುಜಾತಾರನ್ನು ಕಾರಿನಿಂದ ಇಳಿಸಿ ಅಲ್ಲಿಂದ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *