ಸಮಗ್ರ ನ್ಯೂಸ್: ಆಸ್ಪತ್ರೆಯಿಂದ ಮನೆಗೆ ಹಿಂದಿರುಗಲು 3 ಕಿಮೀ ನಡೆದುಕೊಂಡು ಬರುತ್ತಿದ್ದ ಗರ್ಭಿಣಿಯೊಬ್ಬಳು ಸೂರ್ಯನ ಶಾಖಕ್ಕೆ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.
ದಹಾನು ತಾಲೂಕಿನ ಓಸರ್ ವೀರ ಗ್ರಾಮದ ಸೋನಾಲಿ ವಾಘಾಟ್ ಸಾವನ್ನಪ್ಪಿದ ಮಹಿಳೆ. ಈಕೆ 7 ಕಿ.ಮೀ ನಡೆದು ಅಲ್ಲಿಂದ ಆಟೋದಲ್ಲಿ ಪ್ರಾಥಮಿಕ ಕೇಂದ್ರಕ್ಕೆ ತೆರಳಿದ್ದಾಳೆ.
9ನೇ ತಿಂಗಳಿನಲ್ಲಿದ್ದ ಮಹಿಳೆಗೆ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಆಕೆ ಬಿಸಿಲಿನಲ್ಲಿ 7ಕಿಮೀ ಪುನಃ ನಡೆದುಕೊಂಡು ಬಂದಿದ್ದಾಳೆ.
ಅದಾದ ಬಳಿಕ ಸಂಜೆಯ ನಂತರ ಸೋನಾಲಿಗೆ ಅನಾರೋಗ್ಯ ಕಾಡಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವೇಳೆ ಬಿಸಿಲಿನ ಶಾಖದಿಂದಾಗಿ ಆಕೆಗೆ ಅನಾರೋಗ್ಯ ಉಂಟಾಗಿದೆ ಎಂದು ದೃಢಪಡಿಸಿದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಜೊತೆಗೆ ಹೊಟ್ಟೆಯಲ್ಲಿರುವ ಮಗುವು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.