Ad Widget .

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನು – ಬೆಳ್ಳುಳ್ಳಿ ತಿನ್ನೋದೆಷ್ಟು ಒಳ್ಳೇದು? ಇಲ್ಲಿದೆ ಡೀಟೈಲ್ಸ್…

ಸಮಗ್ರ ನ್ಯೂಸ್: ಇಂದಿನ ಜೀವನ ಶೈಲಿಯಲ್ಲಿ ರೋಗಗಳನ್ನು ನಿಯಂತ್ರಿಸುವುದು ಅತ್ಯಂತ ಸವಾಲಿನ ಕೆಲಸ. ರೋಗಗಳಿಗೆ ದೊಡ್ಡ ಕಾರಣವಾಗಿರೋದು ಇಂದಿನ ಆಹಾರ ಪದ್ಧತಿ. ರೋಗಗಳಿಂದ ದೂರವಿರಲು ಅನೇಕರು ಮನೆಮದ್ದುಗಳನ್ನು ತಯಾರಿಸುತ್ತಾರೆ. ಅಂತಹವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನು ಮತ್ತು ಬೆಳ್ಳುಳ್ಳಿ ತಿನ್ನುವ ಮೂಲಕ ಹಲವಾರು ರೋಗಗಳಿಂದ ಮುಕ್ತಿ ಪಡೆಯಬಹುದು.

Ad Widget . Ad Widget .

ಜೇನು-ಬೆಳ್ಳುಳ್ಳಿಳನ್ನು ಪೋಷಕಾಂಶಗಳ ನಿಧಿ ಎಂದು ಕರೆಯಲಾಗುತ್ತದೆ. ಈ ಎರಡೂ ವಸ್ತುಗಳು ಮನೆಗಳಲ್ಲಿ ಸುಲಭವಾಗಿ ಸಿಗುತ್ತದೆ. ಹೆಚ್ಚಿನ ಜನರು ಜೇನುತುಪ್ಪ ಮತ್ತು ಬೆಳ್ಳುಳ್ಳಿಯನ್ನು ವಿವಿಧ ರೀತಿಯಲ್ಲಿ ಸೇವಿಸುತ್ತಾರೆ. ಆದರೆ ಎರಡನ್ನೂ ಒಟ್ಟಿಗೆ ತಿನ್ನವುದು ದೇಹಕ್ಕೆ ದುಪ್ಪಟ್ಟು ಪೋಷಕಾಂಶಗಳ ಒದಗಿಸುತ್ತದೆ. ಈ ಬಗ್ಗೆ ಆಯುರ್ವೇದಾಚಾರ್ಯ ಡಾ. ಅಜಯ್ ಯಾದವ್ ಏನು ಹೇಳಿದ್ದಾರೆಂದು ತಿಳಿದುಕೊಳ್ಳೋಣ.

Ad Widget . Ad Widget .

ತೂಕವನ್ನು ನಿಯಂತ್ರಿಸುತ್ತೆ: ಈಗಿನ ಆಹಾರ ಪದ್ದತಿಯಿಂದ ಹೆಚ್ಚಿನ ಜನರು ಬೊಜ್ಜಿನಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದು ದೇಹದ ತೂಕ ಹೆಚ್ಚಾಗುವುದನ್ನು ನಿಯಂತ್ರಿಸುವಲ್ಲಿ ಸಹಾಯವಾಗುತ್ತದೆ.

ಹೃದಯಕ್ಕೆ ಪ್ರಯೋಜನಕಾರಿ:
ಜೇನು ಮತ್ತು ಬೆಳ್ಳುಳ್ಳಿ ಎರಡೂ ಪೋಷಕಾಂಶಗಳ ಉತ್ತಮ ಮೂಲಗಳೆಂದು ಪರಿಗಣಿಸಲಾಗುತ್ತದೆ. ಈ ಎರಡೂ ಪದಾರ್ಥಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದು ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಳ್ಳುಳ್ಳಿ ಮತ್ತು ಜೇನುತುಪ್ಪ ಎರಡೂ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳಿದ್ದವರು ಇದನ್ನು ತಿನ್ನುವುದು ಸೂಕ್ತ.

ಬಲವಾದ ರೋಗನಿರೋಧಕ ಶಕ್ತಿ: ಬೆಳ್ಳುಳ್ಳಿ ಮತ್ತು ಜೇನುತುಪ್ಪ ಎರಡೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಶಿಲೀಂಧ್ರಗಳ ಸೋಂಕು ಸೇರಿದಂತೆ ಅನೇಕ ರೋಗಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಬೆಳಿಗ್ಗಿನ ಸಮಯ ಈ ಎರಡು ಪದಾರ್ಥಗಳನ್ನು ತಿನ್ನುವುದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಶೀತದಿಂದ ಪರಿಹಾರ: ಶೀತ ಸಮಸ್ಯೆ ಇದ್ದವರು, ಬೆಳ್ಳುಳ್ಳಿ ಮತ್ತು ಜೇನುತುಪ್ಪವನ್ನು ಬಳಸುವುದು ಉತ್ತಮ. ಏಕೆಂದರೆ ಬೆಳ್ಳುಳ್ಳಿ ಮತ್ತು ಜೇನುತುಪ್ಪ ಎರಡರ ಪರಿಣಾಮವೂ ಉಷ್ಣಾಂಶದಿಂದ ಕೂಡಿದ್ದು ಶೀತದಿಂದ ಮುಕ್ತಿ ಸಿಗುವಂತೆ ಮಾಡುತ್ತದೆ.

ಗಂಟಲು ನೋವನ್ನು ತೊಡೆದುಹಾಕುತ್ತದೆ: ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಬೆಚ್ಚಗಾಗುವುದರಿಂದ ಶೀತ ಮತ್ತು ಜ್ವರಕ್ಕೆ ಪ್ರಯೋಜನಕಾರಿಯಾಗಿದೆ. ಜೊತೆಗೆ ನೋಯುತ್ತಿರುವ ಗಂಟಲು ಸಮಸ್ಯೆಯನ್ನೂ ಸಹ ನಿವಾರಿಸುತ್ತದೆ. ಎರಡರಲ್ಲೂ ಇರುವ ಬ್ಯಾಕ್ಟೀರಿಯಲ್ ಗುಣಗಳು ಗಂಟಲು ನೋವನ್ನು ನಿವಾರಿಸುವುದರ ಜೊತೆಗೆ ಗಂಟಲಿನ ಊತವನ್ನು ಕಡಿಮೆ ಮಾಡುತ್ತದೆ.

ಇಲ್ಲಿರುವ ವಿವರಗಳನ್ನು ತಜ್ಞರ ಸಲಹೆಯಂತೆ ನೀಡಲಾಗಿದೆ. ಅದಾಗ್ಯೂ ಉಪಯೋಗಿಸುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ – ಸಂ

Leave a Comment

Your email address will not be published. Required fields are marked *