Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಕೆಲವೊಂದು ರಾಶಿಯವರಿಗೆ ಈ ವಾರ ಅದೃಷ್ಟದ ವಾರವಾದರೆ ಇನ್ನು ಕೆಲವರಿಗೆ ಸವಾಲಿನಿಂದ ಕೂಡಿದೆ. ಈ ವಾರ ನಿಮ್ಮ ರಾಶಿಗೆ ಹೇಗಿರಲಿದೆ.

Ad Widget . Ad Widget .

ಮೇಷರಾಶಿ:
ಈ ವಾರ, ನಿಮ್ಮ ಯಾವುದೇ ಪ್ರಮುಖ ಸಮಸ್ಯೆಯಿದ್ದರೆ ಅದು ಕೊನೆಯಾಗುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು. ವಾರದ ಮಧ್ಯದಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಸಹ ಪಡೆಯಬಹುದು. ಈ ಅವಧಿಯಲ್ಲಿ, ನಿಮ್ಮ ಎಲ್ಲಾ ಕೆಲಸಗಳು ನಿಮ್ಮ ಯೋಜನೆಯಂತೆಯೇ ಪೂರ್ಣಗೊಳ್ಳುತ್ತವೆ. ಸಂಗಾತಿಯ ಆರೋಗ್ಯವು ಸ್ವಲ್ಪ ಸಮಯದಿಂದ ಉತ್ತಮವಾಗಿಲ್ಲದಿದ್ದರೆ, ಈ ಅವಧಿಯಲ್ಲಿ ಅವರ ಆರೋಗ್ಯದಲ್ಲಿ ದೊಡ್ಡ ಸುಧಾರಣೆ ಕಂಡುಬರುತ್ತದೆ. ಈ ವಾರ ಹಣದ ವಿಷಯದಲ್ಲಿ ಸ್ವಲ್ಪ ದುಬಾರಿಯಾಗಲಿದೆ, ಆದರೆ ನಿಮ್ಮ ತಿಳುವಳಿಕೆಯೊಂದಿಗೆ ನೀವು ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಗುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಹವಾಮಾನದಲ್ಲಿನ ಬದಲಾವಣೆಯಿಂದ ನೀವು ಸಣ್ಣ ಸಮಸ್ಯೆಗಳನ್ನು ಎದುರಿಸಬಹುದು.

Ad Widget . Ad Widget .

ವೃಷಭ ರಾಶಿ:
ವಾರದ ಆರಂಭವು ನಿಮಗೆ ತುಂಬಾ ಚೆನ್ನಾಗಿದೆ. ಈ ಸಮಯದಲ್ಲಿ ಅಧಿಕ ಕೆಲಸದ ಒತ್ತಡ ಇರಲಿದೆ, ಆದರೆ ನೀವು ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಮೊದಲೇ ಯೋಜನೆ ರೂಪಿಸಿ ಶುರು ಮಾಡಿದರೆ ಅಧಿಕ ಒತ್ತಡಕ್ಕೆ ಒಳಗಾಗದೆ ಮಾಡಿ ಮುಗಿಸಬಹುದು. ವ್ಯಾಪಾರಸ್ಥರು ಅಧಿಕಶ್ರಮ ಹಾಕಬೇಕು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರಲಿದೆ. ಯಾರ ಬಳಿಯಾದರೂ ಸಾಲ ತೆಗೆದುಕೊಂಡಿದ್ದರೆ ಬೇಗನೆ ಮರುಪಾವತಿಗೆ ಪ್ರಯತ್ನಿಸಿ. ಕುಟುಂಬ ಜೀವನದಲ್ಲಿ ಈ ವಾರ ಖುಷಿ ಇರಲಿದೆ. ಆರೋಗ್ಯದ ವಿಷಯದಲ್ಲಿ ಈ ವಾರ ನಿಮಗೆ ಸರಾಸರಿಯಾಗಿರಲಿದೆ.

ಮಿಥುನ ರಾಶಿ:
ಈ ಅವಧಿಯಲ್ಲಿ ಆರ್ಥಿಕ ತೊಂದರೆಗಳಿಂದಾಗಿ ಚಿಂತೆ ಹೆಚ್ಚಾಗಲಿದೆ. ಹಣದ ಕೊರತೆಯಿಂದಾಗಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಹೊಸ ಆದಾಯದ ಮೂಲವನ್ನು ಹುಡುಕುತ್ತಿದ್ದರೆ, ನಿಮ್ಮ ಪ್ರಯತ್ನಗಳನ್ನು ಮತ್ತಷ್ಟು ವೇಗಗೊಳಿಸಬೇಕು. ಕೆಲಸದ ಜಾಗದಲ್ಲಿ ಸ್ಪರ್ಧೆ ಇರಬಹುದು, ನೀವು ನಿಮ್ಮ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿ ಮುಗಿಸಲು ಪ್ರಯತ್ನಿಸಿ. ವ್ಯಾಪಾರಸ್ಥರು ಹಣದ ವ್ಯವಹಾರ ಮಾಡುವಾಗ ತುಂಬಾ ಜಾಗರೂಕರಾಗಿರಿ, ಇಲ್ಲದಿದ್ದರೆ ನೀವು ಮೋಸ ಹೋಗಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಆರೋಗ್ಯ ಹದಗೆಡಬಹುದು.

ಕರ್ಕ ರಾಶಿ:
ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿದ್ದರೆ ಈ ವಾರ ಇತ್ಯರ್ಥವಾಗಲಿದೆ. ಆದರೆ ನೀವು ನಿಮ್ಮ ನಡವಳಿಕೆ ಬಗ್ಗೆ ಗಮನಹರಿಸಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ಪ್ರಯತ್ನಗಳನ್ನು ಮಾಡುತ್ತಿದ್ದರೆ, ಈ ವಾರ ನೀವು ಯಶಸ್ಸನ್ನು ಪಡೆಯಬಹುದು. ಈ ವಾರ ಹಣದ ಬಗ್ಗೆ ಚಿಂತೆ ಬಿಡಿ. ಸರ್ಕಾರಿ ಕೆಲಸ ಮಾಡುವವರಿಗೆ ಈ ವಾರ ಉತ್ತಮ ಸೂಚನೆ ಕಾಣುತ್ತಿದೆ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಈ ಅವಧಿಯಲ್ಲಿ ನಿಮ್ಮ ವ್ಯಾಪಾರದಲ್ಲಿ ಸ್ವಲ್ಪ ಕುಸಿತ ಕಂಡುಬರಬಹುದು. ಇದರ ಜೊತೆಗೆ ಪಾಲುದಾರರೊಂದಿಗಿನ ಹೊಂದಾಣಿಕೆಯು ಹದಗೆಡುವ ಸಾಧ್ಯತೆಗಳಿವೆ. ಆರೋಗ್ಯದ ಬಗ್ಗೆ ನೋಡುವುದಾದರೆ ಈ ವಾರ ಮಿಶ್ರಫಲ.

ಸಿಂಹ ರಾಶಿ:
ಈ ವಾರ ನಿಮಗೆ ಉತ್ತಮವಾಗಿದೆ. ಕೆಲವು ಸಮಯದಿಂದ ಬಿಡುವಿಲ್ಲದ ಕೆಲಸದಿಂದಾಗಿ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡಲು ನಿಮಗೆ ಸಾಧ್ಯವಾಗದಿದ್ದರೆ, ಈ ವರ ಕುಟುಂಬದ ಜೊತೆಗೆ ಸಾಕ್ಷಟು ಸಮಯ ಕಳೆಯುತ್ತೀರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ನೀವು ಉಳಿತಾಯದತ್ತ ಹೆಚ್ಚು ಗಮನಹರಿಸಿದರೆ ಅದು ನಿಮಗೆ ಉತ್ತಮವಾಗಿರುತ್ತದೆ. ವಾರದ ಮಧ್ಯದಲ್ಲಿ, ನೀವು ಕೆಲಸಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಈ ಅವಧಿಯಲ್ಲಿ ನೀವು ತುಂಬಾ ಸಂತೋಷವಾಗಿರುತ್ತೀರಿ ಮತ್ತು ಧನಾತ್ಮಕವಾಗಿ ಆಲೋಚಿಸುತ್ತೀರಿ. ಪ್ರೇಮಿಯಾಗಿದ್ದರೆ ಮದುವೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಈ ವಾರ ಸರಾಸರಿಯಾಗಿರಲಿದೆ.

ಕನ್ಯಾ ರಾಶಿ:
ನಿಮ್ಮ ಆಹಾರ ಮತ್ತು ದಿನಚರಿಯ ಬಗ್ಗೆ ನೀವು ಕಾಳಜಿ ವಹಿಸಿದರೆ ನಿಮ್ಮ ಅರ್ಧ ಚಿಂತೆ ದೂರಾಗಲಿದೆ. ಕೆಲಸದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ನೀವು ಪ್ರಗತಿ ಹೊಂದುವ ಸಾಧ್ಯತೆಯಿದೆ. ನೀವು ವಿದೇಶಕ್ಕೆ ಹೋಗಿ ಉದ್ಯೋಗ ಮಾಡಲು ಬಯಸಿದರೆ, ವಾರದ ಕೊನೆಯಲ್ಲಿ ನಿಮಗೆ ಉತ್ತಮ ಅವಕಾಶ ಸಿಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನೀವು ಹೆಚ್ಚು ಉಳಿಸಲು ಸಾಧ್ಯವಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ವಾದಗಳು ಅಥವಾ ಘರ್ಷಣೆಗಳನ್ನು ತಪ್ಪಿಸಿ. ಇಲ್ಲದಿದ್ದರೆ ಮನೆಯ ಶಾಂತಿ ಹಾಳಾಗುವುದು. ನೀವು ಪರಸ್ಪರರ ಭಾವನೆಗಳನ್ನು ಗೌರವಿಸಬೇಕು.

ತುಲಾ ರಾಶಿ:
ಈ ವಾರ ನಿಮಗೆ ಸ್ವಲ್ಪ ಸವಾಲಿನಿಂದ ಕೂಡಿರಲಿದೆ. ಕೆಲಸದ ಹೊರೆ ಮತ್ತು ಮನೆಯ ಜವಾಬ್ದಾರಿಗಳು ನಿಮ್ಮನ್ನು ತುಂಬಾ ಆಯಾಸಗೊಳಿಸಬಹುದು. ಈ ಸಮಯದಲ್ಲಿ ನಿಮ್ಮ ಕೆಲವು ಕಾರ್ಯಗಳು ನಿಮ್ಮ ಯೋಜನೆಯ ಪ್ರಕಾರ ಪೂರ್ಣಗೊಳ್ಳದೆ ಇರುವುದರಿಂದ ನಿರಾಶೆ ಉಂಟಾಗಬಹುದು. ಹಣಕಾಸಿನ ಸ್ಥಿತಿಯು ನಿಮ್ಮ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.ಈ ಅವಧಿಯಲ್ಲಿ ಹಣಕಾಸಿನ ಬಗ್ಗೆ ಜಾಗ್ರತೆವಹಿಸಿ, ಖರ್ಚಿನ ಮೇಲೆ ನಿಗಾ ಇಡಿ. ಇದಲ್ಲದೆ, ಈ ಸಮಯದಲ್ಲಿ ಹಣಕ್ಕೆ ಸಂಬಂಧಿಸಿದ ಯಾವುದೇ ವಹಿವಾಟು ಮಾಡುವುದನ್ನು ತಪ್ಪಿಸಿ. ಆರೋಗ್ಯ ಬಗ್ಗೆ ನೋಡುವುದಾದರೆ ಮಾನಸಿಕ ಒತ್ತಡ ಅಧಿಕವಿರಲಿದೆ, ಆರೋಗ್ಯ ದುರ್ಬಲವಾಗಿರಲಿದೆ.

ವೃಶ್ಚಿಕ ರಾಶಿ:
ನೀವು ವಿದ್ಯಾರ್ಥಿಯಾಗಿದ್ದರೆ, ಈ ಸಮಯದಲ್ಲಿ ನಿಮ್ಮ ಶಿಕ್ಷಣದಲ್ಲಿ ದೊಡ್ಡ ಅಡಚಣೆ ಉಂಟಾಗಬಹುದು. ನಿಮ್ಮ ಈ ಸಮಸ್ಯೆ ತಾತ್ಕಾಲಿಕವಾಗಿದ್ದು ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ಶೀಘ್ರದಲ್ಲೇ ನಿಮ್ಮ ತೊಂದರೆಗಳು ಕೊನೆಗೊಳ್ಳುತ್ತವೆ ಮತ್ತು ನಿಮ್ಮ ಅಧ್ಯಯನದ ಮೇಲೆ ನೀವು ಸರಿಯಾಗಿ ಗಮನ ಹರಿಸಲು ಸಾಧ್ಯವಾಗುತ್ತದೆ. ವಿದೇಶಿ ಕಂಪನಿಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ಈ ವಾರ ಅನುಕೂಲಕರವಾಗಿರುತ್ತದೆ. ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಉದ್ಯೋಗಿಗಳಿಗೆ ತಮ್ಮ ಕೆಲಸದ ಕಡೆಗೆ ಸಂಪೂರ್ಣ ಕಾಳಜಿ ವಹಿಸಲು ಸಲಹೆ ನೀಡಲಾಗಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನೀವು ಪೋಷಕರ ಬೆಂಬಲವನ್ನು ಪಡೆಯುತ್ತೀರಿ. ನೀವು ಅವಿವಾಹಿತರಾಗಿದ್ದರೆ ನಿಮ್ಮ ಮದುವೆ ಬಗ್ಗೆ ಮನೆಯಲ್ಲಿ ಚರ್ಚಿಸಬಹುದು. ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರುತ್ತದೆ.

ಧನು ರಾಶಿ:
ಹಣದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಯಾವುದೇ ಹಳೆಯ ಕುಟುಂಬದ ಸಾಲವನ್ನು ತೀರಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನೀವು ಒಡಹುಟ್ಟಿದವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಕುಟುಂಬದೊಂದಿಗೆ ಕೆಲವು ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ನಿಮಗೆ ದೊರೆಯುತ್ತದೆ. ಕೆಲಸದ ದೃಷ್ಟಿಯಿಂದ ನೋಡುವುದಾದರೆ ಈ ವಾರವು ನಿಮಗೆ ಮಿಶ್ರಫಲ. ಕೆಲಸದಲ್ಲಿ ಜಾಗದಲ್ಲಿ ಕೆಲವು ಘಟನೆಗಳಿಂದಾಗಿ ನೀವು ಕೆಲಸ ಬಿಡಲು ಕೂಡ ಯೋಚಿಸಬಹುದು, ಆದರೆ ನೀವು ಆತುರದ ತೀರ್ಮಾನ ತೆಗೆದುಕೊಳ್ಳಬೇಡಿ ಎಂಬ ಸಲಹೆ ನೀಡಲಾಗಿದೆ. ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದ ಕಾರಣ ವ್ಯಾಪಾರಸ್ಥರಿಗೆ ನಿರಾಸೆ ಉಂಟಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ.

ಮಕರ ರಾಶಿ:
ಈ ಅವಧಿಯಲ್ಲಿ ನಿಮ್ಮ ಪ್ರಮುಖ ಚಿಂತೆವೊಂದು ದೂರಾಗಲಿದೆ. ಈ ವಾರ ಕುಟುಂಬದ ಜೊತೆಗೆ ಸಂತೋಷದಿಂದ ಕಳೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನೀವು ಮನೆ, ಭೂಮಿ, ವಾಹನ ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಈ ವಾರ ನಿಮ್ಮ ಆಸೆಯನ್ನು ಪೂರೈಸಬಹುದು. ಉದ್ಯೋಗವಿರಲಿ, ವ್ಯಾಪಾರವಿರಲಿ ನಿಮ್ಮ ಎಲ್ಲಾ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳುತ್ತವೆ. ಈ ಅವಧಿಯಲ್ಲಿ, ನೀವು ಕೆಲಸಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ನಿಮ್ಮ ಆರೋಗ್ಯದಲ್ಲಿ ದೊಡ್ಡ ಸುಧಾರಣೆ ಕಂಡುಬರುತ್ತದೆ.

ಕುಂಭ ರಾಶಿ:
ಕೌಟುಂಬಿಕ ಜೀವನದಲ್ಲಿ ಪರಿಸ್ಥಿತಿಗಳು ಸವಾಲಿನಿಂದ ಕೂಡಿರಲಿದೆ. ಈ ಸಮಯದಲ್ಲಿ, ಕುಟುಂಬದ ಸದಸ್ಯರ ನಡವಳಿಕೆ ನಿಮಗೆ ಬೇಸರ ಉಂಟು ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಭಾವನಾತ್ಮಕವಾಗಿ ತುಂಬಾ ದುರ್ಬಲರಾಗಬಹುದು, ಆದರೆ ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ಒಳ್ಳೆಯದು. ಸರಿಯಾದ ಸಮಯ ಬಂದಾಗ ಎಲ್ಲವೂ ಸಾಮಾನ್ಯವಾಗುತ್ತದೆ. ನೀವು ಕೆಲಸ ಮಾಡುತ್ತಿದ್ದರೆ ಮತ್ತು ಅಪೇಕ್ಷಿತ ವರ್ಗಾವಣೆಗಾಗಿ ದೀರ್ಘಕಾಲ ಕಾಯುತ್ತಿದ್ದರೆ, ಈ ವಾರ ಖುಷಿಯ ಸುದ್ದಿ ಸಿಗಲಿದೆ. ವ್ಯಾಪಾರಸ್ಥರಿಗೆ ಈ ವಾರ ಲಾಭದಾಯಕವಾಗಿರುತ್ತದೆ. ಆರ್ಥಿಕವಾಗಿ ಈ ವಾರ ಚೆನ್ನಾಗಿದೆ. ಆರೋಗ್ಯ ಕೂಡ ಚೆನ್ನಾಗಿರಲಿದೆ.

ಮೀನ ರಾಶಿ:
ಕೆಲಸದ ವಿಷಯದಲ್ಲಿ ಈ ವಾರ ಉತ್ತಮವಾಗಿರುವುದಿಲ್ಲ. ಈ ಸಮಯದಲ್ಲಿ, ನೀವು ಕೆಲಸದಲ್ಲಿ ಕೆಲವೊಂದು ಸವಾಲುಗಳನ್ನು ಎದುರಿಸಬಹುದು. ಕಛೇರಿಯಲ್ಲಿ ಕಠಿಣ ಪರಿಶ್ರಮದ ಹೊರತಾಗಿಯೂ, ಪ್ರಗತಿಯನ್ನು ಪಡೆಯದ ಕಾರಣ ನಿಮ್ಮ ಆತ್ಮವಿಶ್ವಾಸ ಕುಸಿಯಬಹುದು. ಜತೆಗೆ ವ್ಯಾಪಾರಸ್ಥರ ಸಂಕಷ್ಟ ಕೂಡ ಹೆಚ್ಚಾಗುವುದು. ಹಣದ ವಿಷಯದಲ್ಲಿ ಈ ವಾರ ಸಾಮಾನ್ಯವಾಗಿರುತ್ತದೆ. ನಿಮ್ಮ ಮನೆಯಲ್ಲಿ ವಯಸ್ಸಾದ ಸದಸ್ಯರು ಇದ್ದರೆ, ಈ ಅವಧಿಯಲ್ಲಿ ಅವರ ಆರೋಗ್ಯವು ಕ್ಷೀಣಿಸಬಹುದು. ಅವರ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ಹಳೆಯ ಕಾಯಿಲೆ ಮರುಕಳಿಸುವ ಸಾಧ್ಯತೆ ಇರುವುದರಿಂದ ನೀವು ಆರೋಗ್ಯಕರ ಜೀವನಶೈಲಿ ಕಡೆಗೆ ಅಧಿಕ ಗಮನಹರಿಸಬೇಕು.

Leave a Comment

Your email address will not be published. Required fields are marked *