Ad Widget .

‘ನೀನು ಯಾರಿಗೆ ಓಟು ಹಾಕಿದ್ದೀ’ ಎಂದು ರಿಕ್ಷಾ ಚಾಲಕನಿಗೆ ಜೀವಬೆದರಿಕೆ ಹಾಕಿದ ಬಿಜೆಪಿ ಕಾರ್ಯಕರ್ತ

ಸಮಗ್ರ ನ್ಯೂಸ್: ‘ನೀನು ಯಾರಿಗೆ ಓಟು ಹಾಕಿದ್ದೀ’ ಎಂದು ರಿಕ್ಷಾ ಚಾಲಕನಿಗೆ ಜೀವ ಬೆದರಿಕೆ ಹಾಕಿದ ಬಗ್ಗೆ ಬಿಜೆಪಿ ಕಾರ್ಯಕರ್ತನ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ಆರೋಪಿಯನ್ನು ಪಳ್ಳಿ ಗ್ರಾಮದ ವಾಸಿ ಚರಣ್ ಎಂದು ಗುರುತಿಸಲಾಗಿದೆ.
ರಿತೇಶ್ ಪಳ್ಳಿಯಲ್ಲಿ ಅಟೋರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಮೇ.13 ರಂದು ನಿಂಜೂರಿಗೆ ಬಾಡಿಗೆ ಬಿಟ್ಟು ರಿಕ್ಷಾದಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಪಳ್ಳಿ ಗ್ರಾಮದ ವಾಸಿ ಚರಣ್ ಎಂಬಾತನು ತನ್ನ KA19 MH 3171 ನೋಂದಣಿಯ ಕಾರಿನಲ್ಲಿ ಬಂದು ರಿಕ್ಷಾವನ್ನು ತಡೆದು ನಿಲ್ಲಿಸಿದ್ದಾನೆ.

Ad Widget . Ad Widget .

ಬಳಿಕ “ನೀನು ಯಾರಿಗೆ ಓಟು ಹಾಕಿದ್ದೀ” ಎಂದು ಅವಾಚ್ಯ ಶಬ್ದಗಳಿಂದ ಬೈದು ರಿಕ್ಷಾವನ್ನು ಹತ್ತಿರದಲ್ಲೇ ಇದ್ದ ತೋಡಿಗೆ ದೂಡಲು ಪ್ರಯತ್ನಿಸಿದ್ದಾನೆ. ಜೊತೆಗೆ “ನಿಮ್ಮ ಅಣ್ಣ ಅನೂರು ಶೆಟ್ಟಿ ಎಲ್ಲಿದ್ದಾನೆ. ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾನೆ. ಚರಣ್ ಬಿಜೆಪಿ ಕಾರ್ಯಕರ್ತನಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *