ಸಮಗ್ರ ನ್ಯೂಸ್: ಇತ್ತೀಚೆಗೆ ಜಲಪ್ರಳಯದ ನೋವಿನ ದಿನದ ಕುರಿತು ಸದ್ದು ಮಾಡುತ್ತಿರುವ 2018 ಸಿನಿಮಾ ನೋಡಿದ ಪ್ರೇಕ್ಷಕರು ಕಣ್ಣೀರು ಒರೆಸುತ್ತಾ ಭಾವುಕರಾಗಿ ಥಿಯೇಟರ್‌ನಿಂದ ಹೊರ ಬರುತ್ತಿದ್ದಾರೆ ಚಿತ್ರಮಂದಿರದಲ್ಲಿ ಬಿಡುಗಡೆಯಾದಾಗಿನಿಂದ ಅತ್ಯುತ್ತಮ ವಿಮರ್ಶೆಗಳನ್ನು ಪಡೆದಿರುವ ‘2018’ ಚಿತ್ರವು ಭರ್ಜರಿಯಾಗಿ ಓಡುತ್ತಲೇ ಇದೆ. ಇದೀಗ ಬಿಡುಗಡೆಯಾದ ಒಂದೇ ವಾರದಲ್ಲಿ ಚಿತ್ರ ಐವತ್ತು ಕೋಟಿ ಕ್ಲಬ್‌ನಲ್ಲಿ ಸ್ಥಾನ ಪಡೆದಿದೆ. ಚಿತ್ರದ ಕಲೆಕ್ಷನ್ ಇದುವರೆಗೆ 55.6 ಕೋಟಿ ರೂಪಾಯಿ ಗಳಿಸಿದೆ.
ಈ ಚಿತ್ರ ಕೇರಳದಿಂದಲೇ 25 ಕೋಟಿ, ವಿದೇಶದಿಂದ 28.15 ಕೋಟಿ ರೂ. ಮತ್ತು ಇತರೆ ರಾಜ್ಯಗಳಿಂದ 2.3 ಕೋಟಿ ರೂಪಾಯಿ ಗಳಿಸಿ ಬಾಕ್ಸ್-ಆಫೀಸ್‌ನಲ್ಲಿ ಹಿಟ್ ಎನಿಸಿದೆ. ಆಸ್ಟ್ರೇಲಿಯಾ ಮತ್ತು ಯುಕೆಯಲ್ಲಿ ಚಿತ್ರವು ದಾಖಲೆಯ ಕಲೆಕ್ಷನ್ ಮಾಡಿದೆ. ಇತರೆ ಭಾಷೆಗಳಲ್ಲಿ ಚಿತ್ರ ಬಿಡುಗಡೆಗೂ ಮೊದಲೆ ಬಂದಿರುವ ಕಲೆಕ್ಷನ್ ಭರವಸೆಯನ್ನು ಮೂಡಿಸಿದೆ. 2018ರ ಪ್ರವಾಹದಲ್ಲಿ ಕೇರಳದ ಜನರು ಒಗ್ಗೂಡಿ ಬದುಕುಳಿದಿರುವ ಹಿನ್ನೆಲೆಯಲ್ಲಿ ಜೂಡ್ ಆಂಟೋನಿ ಜೋಸೆಫ್ ನಿರ್ದೇಶನದ ಚಿತ್ರ’ 2018 ವ್ಯಾಪಕ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಈ ಚಿತ್ರದಲ್ಲಿ ಟೊವಿನೋ ಥಾಮಸ್, ಕುಂಚಾಕೊ ಬೋಬನ್, ಆಸಿಫ್ ಅಲಿ, ವಿನೀತ್ ಶ್ರೀನಿವಾಸನ್, ಅಪರ್ಣಾ ಬಾಲಮುರಳಿ, ನರೇನ್ ಮತ್ತು ಸಿದ್ದಿಕ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದ್ದು 63 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾದಲ್ಲಿ ಜಲಪ್ರಳಯದ ಸಂದರ್ಭದಲ್ಲಿದ್ದ ನೋವು. ಕಷ್ಟ, ಒಗ್ಗಟ್ಟಾದ ಜನರಲ್ಲಿನ ನೆರವು ಎಲ್ಲರವನ್ನೂ ರೋಚಕವಾಗಿ ತೋರಿಸಲಾಗಿದೆ.
ಸಿನಿಮಾವನ್ನು ತುಂಬಾ ಸರಳವಾಗಿ ನಿರ್ಮಾಣ ಮಾಡಿದ್ದು ವಾಸ್ತವಕ್ಕೆ ಸನಿಹವಾಗಿ ತೆರೆಯಲ್ಲಿ ಮೂಡಿಬಂದಿದೆ. ಸಿನಿಮಾ ನೋಡಿದ ಜನರು ಕಣ್ಣೀರಿಡುತ್ತಾ ಥಿಯೇಟರ್‌ನಿಂದ ಹೊರಬಂದು ಸಿನಿಮಾದ ಮೇಕಿಂಗ್ ಬಗ್ಗೆಯೂ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.