Ad Widget .

ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ ಜಿಹಾದಿಗಳ ಅಟ್ಟಹಾಸ| ಬೆಳಗಾವಿಯಲ್ಲಿ ಮೊಳಗಿದ ‘ಪಾಕಿಸ್ತಾನ್ ಜಿಂದಾಬಾದ್’

ಸಮಗ್ರ ನ್ಯೂಸ್: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ, ಸೋನಿಯಾ ಗಾಂಧಿಯವರ ರಾಜಕೀಯ ತಂತ್ರಗಳು, ಪ್ರಿಯಾಂಕಾ ಗಾಂಧಿಯವರ ಪರಿಶ್ರಮ, ಸಿದ್ದರಾಮಯ್ಯನವರ ಮಾಸ್ ಇಮೇಜ್, ಡಿ.ಕೆ.ಶಿವಕುಮಾರ್ ಅವರ ಪಕ್ಷ ಸಂಘಟನೆ, ಕಾರ್ಯಕರ್ತರ ಶ್ರಮ ಇವೆಲ್ಲದರ ಫಲವಾಗಿ ಕಾಂಗ್ರೆಸ್ ಗೆದ್ದಿದೆ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇಂತಹ ವಿಜಯೋತ್ಸವವನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅತ್ಯಂತ ಸಂಭ್ರಮದಿಂದ ಆಚರಿಸಬೇಕು ನಿಜ. ಆದರೆ, ಕೆಲವರು ಕಿಡಿಗೇಡಿಗಳ ಕೃತ್ಯದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವಂತೆ ಮಾಡಿದ್ದಾರೆ.

Ad Widget . Ad Widget . Ad Widget .

ಕಾಂಗ್ರೆಸ್ ಪಡೆದ ಗೆಲುವಿನಿಂದ ಕರ್ನಾಟಕ ಮಾತ್ರವಲ್ಲದೆ ದೇಶದ ಹಲವೆಡೆ ಸಂಭ್ರಮ ಆಚರಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿಯಲ್ಲೂ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೆಲ ಯುವಕರ ವರ್ತನೆ ವಿವಾದಕ್ಕೀಡಾಯಿತು.

‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳು ಚರ್ಚೆಗೆ ಕಾರಣವಾಯಿತು.
ಪೊಲೀಸರು ತಡೆದರೂ ಘೋಷಣೆ ಕೂಗುತ್ತಲೇ ಇದ್ದರು. ಇದೀಗ ಈ ವಿಚಾರ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ. ಇದರ ವಿಡಿಯೋವನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದೆ.

ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಕರ್ನಾಟಕದ ಸಾಮಾಜಿಕ ಸ್ವರೂಪವನ್ನೇ ಹಾಳು ಮಾಡುತ್ತಿದೆ ಎಂದು ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ. ಇದು ಈಗ ಹೊಸ ಸಂಚಲನ ಮೂಡಿಸಿದೆ.

ಇಷ್ಟೇ ಅಲ್ಲ, ಮತ್ತೊಂದು ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಅಮಿತ್ ಮಾಳವೀಯ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಯುವಕನೊಬ್ಬ ಪಾಕಿಸ್ತಾನದ ಧ್ವಜ ಹಿಡಿದುಕೊಂಡು ಬೀಸುತ್ತಿರುವ ದೃಶ್ಯವಿದೆ. ಇವರು ಟ್ವೀಟ್ ಮಾಡಿರುವ ವಿಡಿಯೋಗಳಿಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿರುವುದು ಗಮನಾರ್ಹ.

Leave a Comment

Your email address will not be published. Required fields are marked *