Ad Widget .

ಕಾಂಗ್ರೆಸ್ ಎಂದಿಗೂ ಬಿಜೆಪಿಗೆ ಸಮಾನವಲ್ಲ; ಉಚಿತಗಳಿಗೆ ಮನಸೋಲದೇ ಇದು ಕರುನಾಡ ಜನತೆ ನೀಡಿದ ಭಿಕ್ಷೆಯಿದು ನೆನಪಿರಲಿ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಬಿಜೆಪಿ ಆಡಳಿತವನ್ನು ಕೊನೆಗಾಣಿಸಿ ಕಾಂಗ್ರೆಸ್ ಗೆ 136 ಸ್ಥಾನವನ್ನು ಕೊಟ್ಟು ಜನತೆ ಗೆಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹವ್ಯಾಸಿ ಪತ್ರಕರ್ತ ಎಲ್.ಕೆ ಮಂಜುನಾಥ್ ಬರೆದುಕೊಂಡ ಪೇಸ್ ಬುಕ್ ಬರಹವನ್ನು ಯಥಾವತ್ ಪ್ರಕಟಿಸಲಾಗಿದೆ. ಸದ್ಯದ ಕಾಲಘಟ್ಟದಲ್ಲಿ ಇದು ಅರ್ಥಪೂರ್ಣವಾಗಿದೆ – ಸಂ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಾಂಗ್ರೆಸ್‌ ಪಕ್ಷದ ನಾಯಕರು ಹಣಬಲದಿಂದ, ಕಾರ್ಯಕರ್ತರ ಶ್ರಮದಿಂದ, ನೇಮಿಸಿಕೊಂಡ ಏಜೆನ್ಸಿಗಳಿಂದ, ಐದು ಗ್ಯಾರಂಟಿಗಳುಳ್ಳ ಪ್ರಣಾಳಿಕೆಯಿಂದ ಚುನಾವಣೆ ಗೆದ್ದಿದ್ದೇವೆ ಎಂದು ಭಾವಿಸಿಕೊಂಡರೆ, ಮೆರೆದಾಡಿದರೆ ಮುಠ್ಠಾಳತನವಾಗುತ್ತದೆ. ಈ ಯಾವ ಬಲಾಬಲಗಳಲ್ಲೂ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್‌ ಸರಿಸಮವಾಗಲಾರದು.

Ad Widget . Ad Widget . Ad Widget .

ಇದು ಕರ್ನಾಟಕದ ಪ್ರಜ್ಞಾವಂತ ಮತದಾರರು ಕೋಮುವಾದಕ್ಕೆ ಅಂಟಿಕೊಂಡ ಬಿಜೆಪಿ ಪಕ್ಷವನ್ನು ತಿರಸ್ಕರಿಸಿದ್ದರಿಂದ ಕಾಂಗ್ರೆಸ್‌ಗೆ ನಿರಾಯಾಸ ಗೆಲುವು ಸಿಕ್ಕಿದೆಯಷ್ಟೇ. ಇದನ್ನು ಕನ್ನಡಿಗರು ಕೊಟ್ಟಿರುವ ಅಧಿಕಾರದ ಭಿಕ್ಷೆ ಎಂದು ಕಾಂಗ್ರೆಸ್‌ ಮನಗಾಣಬೇಕಿದೆ.

ಕೋಮುವಾದ, ದ್ವೇಷ ಬಿತ್ತನೆ, ಧರ್ಮ-ರಾಷ್ಟ್ರೀಯತೆಯ ದುರ್ಬಳಕೆ, ಸರ್ವಾಧಿಕಾರ, ಮಾನವೀಯತೆ ವಿರೋಧಿ ಚಟುವಟಿಕೆಗಳು ಎಲ್ಲೆ ಮೀರಿದ್ದರಿಂದ ವಿಚಾರವಂತರ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿತ್ತು. ನಾಡಿನ ಸಾಹಿತಿಗಳು, ಪ್ರಬುದ್ಧರು ಹಾಗೂ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಅಚಲ ನಂಬಿಕೆ ಇಟ್ಟುಕೊಂಡಿರುವ ಲಕ್ಷಾಂತರ ಮಂದಿ ಬಿಜೆಪಿ ವಿರುದ್ಧ ಮುಕ್ತವಾಗಿ ಮಾತನಾಡತೊಡಗಿದರು. ಹಾಗಾಗಿ ಗೋದಿ-ಮಾಧ್ಯಮಗಳು ಬಿತ್ತಿದ ಬಿಜೆಪಿ ಮೋಹಿತ ಸುದ್ದಿಗಳಿಂದ ಕನ್ನಡಿಗರನ್ನು ಮೋಸ ಮಾಡಲಾಗಲಿಲ್ಲ.

ವಿಚಾರವಂತರೇಕೆ ರಾಜಕಾರಣದ ಅಂಗಳಕ್ಕಿಳಿದರು?:
ಕೇವಲ ಪ್ರೊಪಗಾಂಡ ತುಂಬಿದ ಸರಕುಗಳ ಪ್ರಚಾರದ ಅಬ್ಬರದಲ್ಲಿ ಸಮಾಜಮುಖಿ ಸಂದೇಶಗಳನ್ನು ಹೊತ್ತ ಸಾಹಿತ್ಯ, ಸಿನಿಮಾ, ನಾಟಕ, ಬರಹ ರೂಪಕಗಳನ್ನು ಸದ್ದಡಗಿಸಲಾಗುತ್ತಿದೆ. ಹೆಚ್ಚಿನ ಸುದ್ದಿ ಮಾಧ್ಯಮಗಳು ಪಕ್ಷಗಳಿಗೆ ಮಾರಾಟಗೊಂಡಿವೆ. ಹೆಚ್ಚಿನ ಪತ್ರಕರ್ತರು ಒಬ್ಬೊಬ್ಬ ರಾಜಕಾರಣಿಯ ಗೇಟ್‌ ಕೀಪರ್‌ಗಳಾಗಿದ್ದಾರೆ. ಪಾಠ ಮಾಡುವ ಪ್ರಾಧ್ಯಪಕರು ವಿದ್ಯಾರ್ಥಿಗಳಿಗೆ, ಮಠ-ಮಂದಿರ-ಮಸೀದಿಗಳ ಪ್ರಮುಖರು ಭಕ್ತರಿಗೆ, ‘ಇಂತವರಿಗೇ ಮತ ಹಾಕಿ’ರೆಂದು ಕಿವಿತುಂಬುತ್ತಿದ್ದಾರೆ.

ಹುಟ್ಟಿನಿಂದಲೇ ಅಡರಿಕೊಂಡು ಬಂದಿರುವ ಜಾತಿ, ಧರ್ಮ, ದೇವರು, ಸಂಸ್ಕೃತಿ, ಭಾಷೆ, ಆಹಾರ ಎಲ್ಲವನ್ನೂ ರಾಜಕಾರಣಿಗಳು ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿರುವ ಸಂಗತಿಯನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ಅಹಮಿಕೆಗೆ ಶಿಕ್ಷಿತ ವರ್ಗದ ಹೆಚ್ಚಿನವರು ತುತ್ತಾಗಿದ್ದಾರೆ.

ಹಾಗಾಗಿ ಒಲವಿಲ್ಲದಿದ್ದರೂ, ರಾಜಕಾರಣಿಗಳ ಹೊಲಸು ಮನಸ್ಥಿತಿಗಳು ಗೊತ್ತಿದ್ದರೂ, ಅಂಧ ಬೆಂಬಲಿಗರ ದ್ವೇಷಕ್ಕೆ ತುತ್ತಾದರೂ, ಬಾಡಿಗೆ ಟ್ರೋಲರ್‌ಗಳಿಂದ ಚಾರಿತ್ರ್ಯ ಹರಣಕ್ಕೆ ಒಳಗಾದರೂ, ರಾಜಕಾರಣದ ಅಂಗಳದೊಳಗೆ ಪ್ರವೇಶಿಸಿ ಧ್ವನಿಯೇರಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಅದನ್ನೇ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೋಮುವಾದದ ಕಿಡಿ ಹಚ್ಚಿ ಮೈಕಾಯಿಸಿಕೊಳ್ಳುತ್ತಿದ್ದ ಕೆಲವು ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಹಣ ಬಲದಿಂದ ಗೆದ್ದಿರುವ ಭ್ರಷ್ಟರನ್ನು ಏನೂ ಮಾಡಲಾಗದ ಅಸಹಾಯಕತೆಗೂ ಅರ್ಹರಾಗಿದ್ದಾರೆ.

ಅದೇನೆ ಇರಲಿ:
ಸಾಹಿತಿಗಳು, ಶಿಕ್ಷಕರು, ಪತ್ರಕರ್ತರು, ಧಾರ್ಮಿಕ ಮುಖಂಡರು, ಪೊಲೀಸರು, ಸರ್ಕಾರಿ ಅಧಿಕಾರಿಗಳು, ವಕೀಲರು, ಸಿನಿಮಾ ಕ್ಷೇತ್ರದವರು, ಕ್ರೀಡಾಪಟುಗಳು, ಇತಿಹಾಸಕಾರರು ಯಾವುದೇ ಒಂದು ನಿರ್ದಿಷ್ಟ ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಹೀನ ಚಾಳಿ ಬಿಡಬೇಕಿದೆ. ರಾಜಕಾರಣಿಗಳ ಕಪಿಮುಷ್ಠಿಗೆ ಸಿಲುಕದೆ ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಮನನ ಮಾಡಿಕೊಳ್ಳಬೇಕಿದೆ. ಆದರೆ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಧಕ್ಕೆ ಬಂದಂತ ಸಮಯದಲ್ಲಿ ಈ ಬಾರಿಯಂತೆ ಜವಾಬ್ದಾರಿತನದಿಂದ ಬೀದಿಗಿಳಿಯಬೇಕಿದೆ.

ಪ್ರಗತಿ ಪರ ವಲಯ ‘ಬಿಜೆಪಿಯನ್ನು ತಿರಸ್ಕರಿಸಿ’ ಎಂದು ಸ್ಪಷ್ಟ ಸಂದೇಶವನ್ನು ಕೊಟ್ಟಿತ್ತು. ಕಾಂಗ್ರೆಸ್‌ ಗೆಲ್ಲುವೆಡೆ ಕಾಂಗ್ರೆಸ್‌ಗೆ, ಜೆಡಿಎಸ್‌ ಗೆಲ್ಲುವೆಡೆ ಜೆಡಿಎಸ್‌ಗೆ ಮತದಾನ ಮಾಡಿ ಎಂದು ಬಿಡಿಸಿ ಹೇಳಿತ್ತು. ಅದು ಸಾಧ್ಯವಾಗಿದೆ.

ಎದೆಗಿಳಿದ ‘ಭಾರತ್‌ ಜೋಡೊ ಯಾತ್ರೆ’:
ಕೋಮುವಾದದ ದಳ್ಳುರಿಯಲ್ಲಿ ಬೇಯುತ್ತಿದ್ದ ಭಾರತಕ್ಕೆ ರಾಹುಲ್‌ ಗಾಂಧಿ ನಡೆಸಿದ ‘ಭಾರತ್‌ ಜೋಡೊ ಯಾತ್ರೆ’ಯು ಶಾಂತಿ, ಸಹೃದಯತೆಯ ದಿಕ್ಕನ್ನು ತೋರಿಸಿದೆ. ಕುವೆಂಪು ಅವರ ‘ಸರ್ವ ಜನಾಂಗದ ಶಾಂತಿಯ ತೋಟ’ದ ನಿರ್ಮಾಣ ರಾಹುಲ್‌ ಗಾಂಧಿಯಿಂದ ಸಾಧ್ಯ ಎಂಬ ವಿಶ್ವಾಸವನ್ನು ಭಾರತೀಯರು ಮನವರಿಕೆ ಮಾಡಿಕೊಂಡಂತಿದೆ. ಇಂದಿನ ಕರ್ನಾಟಕದ ಗೆಲುವು, ನಾಳಿನ ಭಾರತದ ಗೆಲುವಾಗಿ ಪರಿವರ್ತನೆಗೊಳಿಸುವ ಹೊಣೆಗಾರಿಕೆ ರಾಹುಲ್‌ ಗಾಂಧಿ ಅವರ ಮೇಲಿದೆ.

ಕುಮಾರಸ್ವಾಮಿ ಬಗ್ಗೆ ಒಂದಿಷ್ಟು:
ರಾಜ್ಯಾದ್ಯಂತ ಓಡಾಡಿದ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಸ್ತಿತ್ವಕ್ಕಾಗಿ ಏಕಾಂಗಿ ಹೋರಾಟ ನಡೆಸಿದ್ದರು. ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಿಲ್ಲ. ಮೂರು ಕೊಟ್ಟರೆ ಸೊಸೆ ಕಡೆಗೆ, ಆರು ಕೊಟ್ಟರೆ ಅತ್ತೆ ಕಡೆಗೆ ಎಂಬ ನವರಂಗಿ ಆಟವಾಡಿದ್ದರ ಪರಿಣಾಮವಿದು. ಇನ್ನಾದರೂ ಕುಮಾರಸ್ವಾಮಿ ಪ್ರಾದೇಶಿಕ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಪ್ರಯತ್ನ ನಡೆಸಲಿ.

ಸ್ವ ಕ್ಷೇತ್ರದ ಬಗ್ಗೆ ಒಂದಿಷ್ಟು:
ಸಕಲೇಶಪುರ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್ ಪರ ಕೆಲಸ ಮಾಡಬೇಕೆಂಬ ಮನಸ್ಸಿತ್ತು. ಆದರೆ ಮತ್ತದೇ ಎಚ್.ಕೆ.ಕುಮಾರಸ್ವಾಮಿಗೆ ಟಿಕೆಟ್ ಕೊಟ್ಟರು. ಅವರಿಂದ ಸಕಲೇಶಪುರ ಕ್ಷೇತ್ರಕ್ಕೆ ಏನಾದರೂ ಆಗಿದೆಯಾ ಕೇಳಿದರೆ ಯಾರೊಬ್ಬರಿಂದಲೂ ಪಾಸಿಟಿವ್ ಉತ್ತರ ಬರುವುದಿಲ್ಲ. ಪಕ್ಷಕ್ಕೆ ಎಚ್.ಕೆ.ಕುಮಾರಸ್ವಾಮಿಯಿಂದ ಏನು ಉಪಯೋಗವಾಗಿದೆಯೋ ಗೊತ್ತಿಲ್ಲ. ಕೇವಲ ದೇವೇಗೌಡರ ಮೇಲಿನ ಅಭಿಮಾನದಿಂದ ನಿರಂತರವಾಗಿ ಗೆಲ್ಲುತ್ತ ಬಂದಿದ್ದೇ ಕುಮಾರಸ್ವಾಮಿಯ ಹಿರಿತನ. ಮನೆಯಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಪರ ಮತ ಹಾಕೋಣಾಂತ ಇದ್ದೀವಿ ಎಂದಾಗ ಮೌನಕ್ಕೆ ಶರಣಾಗಿದ್ದೆ.

ಬರಹ: ಎಲ್ ಕೆ ಮಂಜುನಾಥ್, ಹವ್ಯಾಸಿ ಪತ್ರಕರ್ತರು

Leave a Comment

Your email address will not be published. Required fields are marked *