Ad Widget .

ಮೋಡಿ ಮಾಡದ ಮೋದಿ ರೋಡ್ ಶೋ ಪ್ರಚಾರ| ಮೋದಿಯ‌ನ್ನು ನೋಡಿದ್ದಷ್ಟೇ ಓಟು ಹಾಕಿಲ್ಲ!!

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇದ್ದುದು ಚುನಾವಣಾ ಫಲಿತಾಂಶದ ಮೂಲಕ ಸ್ಪಷ್ಟವಾಗಿದೆ. ಜನರ ಅಸಮಾಧಾನದ ಮುಂದೆ ಪ್ರಧಾನಿ ನರೇಂದ್ರ ಮೋದಿ ಎಷ್ಟೇ ಮೋಡಿ ಮಾಡಿದರೂ ಅದು ಮತದಾನರ ಮುಂದೆ ಕಮಾಲ್ ಮಾಡಲು ಸಾಧ್ಯವಾಗಿಲ್ಲ ಎಂಬುದು ನಿಜವಾಗುತ್ತಿದೆ.

Ad Widget . Ad Widget .

ಪ್ರಧಾನಿ ಮೋದಿ ಅವರು ಚುನಾವಣೆಗೆ ಇನ್ನೂ ಮೂರು ವಾರ ಬಾಕಿ ಇರುವಾಗಲೇ ರಾಜ್ಯ ಪ್ರವಾಸ ಆರಂಭಿಸಿದರು. ಹಿಂದೆಲ್ಲಾ ಪ್ರಧಾನಿಯಾದವರು ಕೇವಲ ಒಂದು ಅಥವಾ ಹೆಚ್ಚೆಂದರೆ ಎರಡು ಬಾರಿ ಬೆಂಗಳೂರಿಗೆ ಬಂದು ಹೋಗುತ್ತಿದ್ದರು.

Ad Widget . Ad Widget .

ಆದರೆ, ಪ್ರಧಾನಿ ನರೇಂದ್ರ ಮೋದಿ ಅದನ್ನು ಸುಳ್ಳು ಮಾಡಿದರು. ಚುನಾವಣೆಗೆ ಇನ್ನೂ ಮೂರು ವಾರ ಬಾಕಿ ಇರುವಾಗಲೇ ರಾಜ್ಯ ಪ್ರವಾಸ ಪ್ರಾರಂಭಿಸಿದರು. ಹಳೆ ಮೈಸೂರು ಭಾಗದಿಂದ ಪ್ರವಾಸ ಆರಂಭಿಸಿದ ಪ್ರಧಾನಿ ಬಳಿಕ ಬೆಂಗಳೂರು, ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ, ಹೀಗೆ ಎಲ್ಲಾ ಪ್ರದೇಶಗಳು ಮತ್ತು ಬಹುತೇಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರು.

ಪ್ರಧಾನಿ ರೋಡ್ ಶೋ ಮಾಡಿದರೆ ಅದನ್ನು ನೋಡಲು ಲಕ್ಷೋಪಲಕ್ಷ ಜನ ಸೇರುತ್ತಿದ್ದರೂ ಸಹ ಅದು ಮತಗಳಾಗಿ ಪರಿವರ್ತನೆ ಆಗಿಲ್ಲ. ಕೇವಲ ಮೋದಿಯವನರನ್ನು ನೋಡಲು ಮಾತ್ರ ಜನ ಸೇರುತ್ತಿದ್ದರು ಎಂಬುದು ಈ ಮೂಲಕ ಸ್ಪಷ್ಟವಾಗಿದೆ.

ವಿಶೇಷವೆಂದರೆ ಪ್ರಧಾನಿ ಮೋದಿ ಪ್ರವಾಸ ಮಾಡಿದ ಕ್ಷೇತ್ರಗಳ ಪೈಕಿ ಬಹುತೇಕ ಕಡೆ ಬಿಜೆಪಿಗೆ ಸೋಲಾಗಿದೆ.

Leave a Comment

Your email address will not be published. Required fields are marked *