‘ಬಿಜೆಪಿ ಸೋಲಿನ ಹೊಣೆ ಹೊತ್ತುಕೊಳ್ಳುತ್ತೇನೆ’- ಕಟೀಲ್

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದ್ದು ಇದರ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

Ad Widget ... ..

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಮತದಾರರಿಗೆ ಧನ್ಯವಾದ ತಿಳಿಸುತ್ತ ಒಳ್ಳೆಯಕಾರ್ಯಗಳಿಗೆ ಸಹಕಾರ ನೀಡುತ್ತ, ವಿರೋಧ ಪಕ್ಷವಾಗಿ ಜವಬ್ದಾರಿಯುತ ಕಾರ್ಯ ನಿರ್ವಹಿಸುತ್ತೇವೆ. ಹಾಗೇ ಬಿಜೆಪಿಯ ಸೋಲಿನ ಹೊಣೆ ನನ್ನದು, ಮುಂಬರುವ ಎಂಪಿ ಚುನಾವಣೆಯತ್ತ ಗಮನ ಹರಿಸಿ ಗೆಲ್ಲುತ್ತೇನೆ. ಈ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

Ad Widget

ಮೇ 10ರಂದು 224 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಮೇ 13ರಂದು ಮತ ಎಣಿಕೆ ನಡೆದಿದ್ದು ರಾಜ್ಯದಲ್ಲಿ ಬಿಜೆಪಿ 63ನೇ ಸ್ಥಾನ ಮತ್ತು ಕಾಂಗ್ರೇಸ್ 137ನೇ ಸ್ಥಾನ ಪಡೆದಿದ್ದು ಸ್ಪಷ್ಟಬಹುಮತೊಂದಿಗೆ ಸರ್ಕಾರ ರಚಿಸುತ್ತಿದೆ.

Leave a Comment

Your email address will not be published. Required fields are marked *