ಸಮಗ್ರ ನ್ಯೂಸ್: ರಾಜ್ಯದಲ್ಲಿ ಅಂಚೆ ಮತಗಳ ಎಣಿಕೆ ಬಹುತೇಕ ಮುಗಿದಿದ್ದು, ವರುಣ ಕ್ಷೇತ್ರದಲ್ಲಿ 855 ಅಂಚೆ ಮತಗಳ ಏಣಿಕೆಯಲ್ಲಿ ಸಿದ್ದರಾಮಯ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕೆ.ಆರ್.ಪೇಟೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಮುನ್ನಡೆ. ಅಂಚೆ ಮತಗಳಲ್ಲಿ ಆರಂಭಿಕ ಮುನ್ನಡೆ.
ಕಾರವಾರ, ಉತ್ತರಕನ್ನಡ ಭಟ್ಕಳ ವಿಧಾನಸಭಾ ಕ್ಷೇತ್ರ. ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ್ ಮುನ್ನಡೆ. 800 ಮತಗಳಿಂದ ಮುನ್ನಡೆಯಿರುವ ಸುನೀಲ್ ನಾಯ್ಕ್. ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುನ್ನಡೆ
ಕೊಡಗಿನ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ . ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರ .ಎರಡರಲ್ಲೂ ಬಿಜೆಪಿ ಮುನ್ನಡೆ
ಹೊಸಪೇಟೆ, ಕೂಡ್ಲಿಗಿ ಹರಪನಹಳ್ಳಿ ಬಿಜೆಪಿ ಮುನ್ನಡೆ. ಹಡಗಲಿ, ಕಾಂಗ್ರೆಸ್‌ಗೆ ಮುನ್ನಡೆ. ಹಗರಿಬೊಮ್ಮನಹಳ್ಳಿ ಜೆಡಿಎಸ್ ಮುನ್ನಡೆ. ಬಳ್ಳಾರಿ ನಗರ ಕ್ಷೇತ್ರದ ಅಂಚೆ ಮತ ಎಣಿಕೆ. ಅಂಚೆ ಮತ ಎಣಿಕೆಯಲ್ಲೂ ಹಾವು ಎಣಿ ಆಟ. ಕಾಂಗ್ರೆಸ್ ಹಾಗೂ KRPP ಹಾವು ಎಣಿ ಆಟ. ಅರಕಲಗೂಡು ಜೆಡಿಎಸ್ ಅಭ್ಯರ್ಥಿ ಎ ಮಂಜು ಮುನ್ನಡೆ. ಹಾಸನ ಜಿದ್ಸಾ ಜಿದ್ದಿನ ಹಾಸನ ಕ್ಷೇತ್ರದಲ್ಲಿ ಮೊದಲ ಸುತ್ತಿನ ಎಣಿಕೆ ಕಾರ್ಯ ಪೂರ್ಣ. ಮೊದಲ ಸುತ್ತಿನಲ್ಲಿ ಬಿಜೆಪಿ 3505. ಜೆಡಿಎಸ್ 3429. ಬಿಜೆಪಿಗೆ 76 ಮತಗಳ ಮುನ್ನಡೆ. ಮೊದಲ ಸುತ್ತಿನಲ್ಲಿ ಅಭ್ಯರ್ಥಿ ಪ್ರೀತಂಗೌಡ ಗೆ ಭರ್ಜರಿ ಮುನ್ನಡೆ. ತೀವೃ ಕುತೂಹಲ ಮೂಡಿಸಿದ್ದ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ.
ದಕ್ಷಿಣ ಕನ್ನಡ ಜಿಲ್ಲೆ
1) ಮಂಗಳೂರು ಕ್ಷೇತ್ರ ಕಾಂಗ್ರೆಸ್ ನ ಯು.ಟಿ.ಖಾದರ್ ಮುನ್ನಡೆ
2) ಮಂಗಳೂರು ದಕ್ಷಿಣ- ಬಿಜೆಪಿಯ ವೇದವ್ಯಾಸ ಕಾಮತ್ ಮುನ್ನಡೆ
3) ಮಂಗಳೂರು ಉತ್ತರ – ಬಿಜೆಪಿಯ ಭರತ್ ಶೆಟ್ಟಿ ಮುನ್ನಡೆ
4) ಬಂಟ್ವಾಳ ಕ್ಷೇತ್ರ- ಬಿಜೆಪಿಯ ರಾಜೇಶ್ ನಾಯ್ಕ್ ಮುನ್ನಡೆ
5) ಪುತ್ತೂರು ಕ್ಷೇತ್ರ- ಕಾಂಗ್ರೆಸ್ ನ ಅಶೋಕ್ ರೈ ಹಿಂದಿಕ್ಕಿ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಮುನ್ನಡೆ
6) ಬೆಳ್ತಂಗಡಿ ಕ್ಷೇತ್ರ- ಬಿಜೆಪಿಯ ಹರೀಶ್ ಪೂಂಜಾ ಮುನ್ನಡೆ
7) ಮೂಡಬಿದ್ರೆ ಕ್ಷೇತ್ರ- ಬಿಜೆಪಿಯ ಉಮಾನಾಥ್ ಕೋಟ್ಯಾನ್ ಹಿಂದಿಕ್ಕಿ ಕಾಂಗ್ರೆಸ್ ನ ಮಿಥುನ್ ರೈ ಮುನ್ನಡೆ
8) ಸುಳ್ಯ ಕ್ಷೇತ್ರ- ಬಿಜೆಪಿಯ ಭಾಗೀರಥಿ ಮುರುಳ್ಯ ಮುನ್ನಡೆ