Ad Widget .

‘ದಿ ಕೇರಳ‌ ಸ್ಟೋರಿ’ ಯ ಆಸೀಫಾ ಪಾತ್ರಧಾರಿ ಆ ಪಾತ್ರ ಒಪ್ಪಿಕೊಂಡಿದ್ದೇಕೆ? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಹೌದು, ದಿ ಕೇರಳ ಸ್ಟೋರಿಯಲ್ಲಿ ಆಸೀಫಾ ಎಂಬ ನೆಗೆಟಿವ್​ ರೋಲ್​ ಮಾಡಿದ ನಟಿಯ ಹೆಸರು ಸೋನಿಯಾ ಬಾಲಾನಿ ಓರ್ವ ಹಿಂದೂ ಯುವತಿಯಾಗಿ ಮುಸ್ಲಿಂ ಯುವತಿಯ ಅದರಲ್ಲು ನೆಗೆಟಿವ್​ ರೋಲ್​ನಲ್ಲಿ ಜನಮನ ಗೆದ್ದಿರುವ ಸೋನಿಯಾ ಈಗ ಈ ಚಿತ್ರದ ಕುರಿತು ಮಾತನಾಡಿದ್ದಾರೆ. ನೆಗೆಟಿವ್​ ರೋಲ್​ನಲ್ಲಿ ತಾವು ಅಭಿನಯಿಸಲು ಒಪ್ಪಿಕೊಂಡದ್ದು ಏಕೆ ಎಂಬ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅಂದಹಾಗೆ ಸೋನಿಯಾ ಬಾಲಾನಿ ಆಗ್ರಾ ನಿವಾಸಿ. ಇದಾಗಲೇ ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಜನಪ್ರಿಯ ಧಾರಾವಾಹಿ ಬಡೇ ಅಚ್ಚೆ ಲಗ್ತೆ ಹೈನಲ್ಲಿ ನಟಿಸಿ ಭೇಷ್​ ಎನ್ನಿಸಿಕೊಂಡವರು. ನಂತರ ತುಮ್ ಬಿನ್ -2, ಬಜಾರ್ ಚಿತ್ರಗಳಲ್ಲಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Ad Widget . Ad Widget . Ad Widget .

ಆಸೀಫಾ ಪಾತ್ರದ ಕುರಿತು ಹೇಳಿದ ಅವರು, ‘ಇಂದು ಜನರು ನನ್ನ ಅಭಿನಯವನ್ನು ಮೆಚ್ಚುತ್ತಿದ್ದಾರೆ. ಇದರ ಸಂಪೂರ್ಣ ಕ್ರೆಡಿಟ್ ನನ್ನ ದಿವಂಗತ ತಾಯಿ ಶಾಂತಾ ಮತ್ತು ತಂದೆ ರಮೇಶ್ ಬಾಲಾನಿಗೆ ಸಲ್ಲುತ್ತದೆ. ಜನರು ನನ್ನ ನಟನೆಯನ್ನು ಇಷ್ಟಪಡುತ್ತಾರೆ ಎಂದು ಹೇಳಿದಾಗ ನನಗೆ ತುಂಬಾ ಸಂತೋಷವಾಗುತ್ತದೆ ಎಂದಿದ್ದಾರೆ. ‘ಸಿನಿಮಾದಲ್ಲಿ ನಾಯಕಿ ಮತ್ತು ನೆಗೆಟಿವ್ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ ನಾನೇ ಆಸೀಫಾ ಪಾತ್ರವನ್ನು ಆಯ್ಕೆ ಮಾಡಿಕೊಂಡೆ. ಈ ಪಾತ್ರಕ್ಕಾಗಿ ಹಲವು ನಟಿಯರು ಆಡಿಷನ್ ಮಾಡಿದ್ದಾರೆ. ನಾನು ಗೆದ್ದೆ. ಅದರ ಖುಷಿ ನನಗಿದೆ’ ಎಂದು ನಟಿ ಹೇಳಿದ್ದಾರೆ.

‘ನನ್ನ ಇಡೀ ಕುಟುಂಬ ಜೈಪುರ ಹೌಸ್‌ನಲ್ಲಿ ವಾಸಿಸುತ್ತಿದೆ. ಬಾಲ್ಯದಲ್ಲಿ ನಾನು ನನ್ನ ತಾಯಿ, ಶಾಲೆಯ ಶಿಕ್ಷಕರನ್ನು ಫಾಲೋ ಮಾಡುತ್ತಿದ್ದೆ. ನಾನು ಶಾಲೆಯಲ್ಲಿ ನೃತ್ಯ, ನಟನೆಯನ್ನು ಇಷ್ಟಪಟ್ಟೆ. ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಬಿಕಾಂ ಮಾಡಿದ ನಂತರ ನಾನು ಮುಂಬೈನಲ್ಲಿ ನಟನೆಯನ್ನು ಕಲಿತೆ’ ಎಂದು ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.

Leave a Comment

Your email address will not be published. Required fields are marked *