Ad Widget .

ವಿದೇಶದ ಕಾರಿನ ಸ್ಟೆರಿಂಗ್ ಯಾಕೆ ಎಡಭಾಗದಲ್ಲಿರುತ್ತೆ..?

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಬಹುತೇಕರ ಮನೆಯಲ್ಲಿ ಕಾರು ಇದ್ದೆ ಇರುತ್ತದೆ. ಕಾರನ್ನು ಚಲಾಯಿಸುವ ವೇಳೆ ಎಂದಾದರೂ ಭಾರತದಲ್ಲಿ ಸ್ಟೆರಿಂಗ್ ಬಲಭಾಗದಲಿದ್ದು. ವಿದೇಶದಲ್ಲೇಕೆ ಎಡಭಾಗದಲ್ಲಿರುತ್ತೆ..? ನಾವ್ಯಾಕೆ ಬಲಭಾಗದ ಸ್ಟೆರಿಂಗ್​ ಇರುವ ಕಾರು ಬಳಕೆ ಮಾಡುತ್ತೇವೆ..? ಎಂದು ಯೋಚಿಸಿದ್ದೀರಾ…? ಹೌದು ಎಂದಾದರೆ ನಿಮ್ಮ ಪ್ರಶ್ನೆಗೆ ಉತ್ತರ ಇವತ್ತೇ ಕಂಡುಕೊಳ್ಳಬಹುದು.

Ad Widget . Ad Widget .

ನಾವಂತು ಮೊದಲಿನಿಂದಲೂ ಎಡಗೈಗಿಂತ ಬಲಗೈ ಶ್ರೇಷ್ಟ ಎಂಬುದನ್ನು ನಂಬಿಕೊಂಡು ಬಂದವರು. ಈಗಿನ ಕಾರು ಮಾತ್ರವಲ್ಲ, ಹಿಂದೆ ಎತ್ತಿನ ಬಂಡಿ, ಕುದುರೆ ಟಾಂಗಾದ ಮೇಲೆ ಸವಾರಿ ಮಾಡುವಾಗಲೂ ಭಾರತೀಯರು ಬಲಗೈಯಲ್ಲಿಯೇ ಆಯುಧ ಹಿಡಿದು ಪ್ರಾಣಿಗಳ ಮೇಲೆ ಸವಾರಿ ಮಾಡುತ್ತಿದ್ದರು. ಆದರೆ, ಬ್ರಿಟೀಷರು ಮಾತ್ರ ಎಡಗೈಯ ಬಳಕೆ ಮಾಡುತ್ತಿದ್ದರು.

Ad Widget . Ad Widget .

19ನೇ ಶತಮಾನದ ಕೊನೆಯಲ್ಲಿ ಕಾರುಗಳನ್ನು ರಸ್ತೆಯ ಎಡಭಾಗದಲ್ಲಿ ಓಡಿಸುವುದನ್ನು ಆರಂಭಿಸಿದ್ದರು. ಆದರೆ ಕಾಲ ಕ್ರಮೇಣ ಕಾರುಗಳ ವೇಗ ಕೂಡ ಹೆಚ್ಚಾಗುತ್ತಾ ಬಂದ ಬಳಿಕ ಹಲವು ದೇಶಗಳು ಎಡಗೈ ಸ್ಟೆರಿಂಗ್​ ಮತ್ತು ಬಲಭಾಗದಲ್ಲಿ ವಾಹನ ಚಾಲನೆಯನ್ನು ರೂಢಿಸಿಕೊಂಡವು.

ಭಾರತೀಯರ ವಿಚಾರಕ್ಕೆ ಬಂದರೆ ಬಲಭಾಗದಿಂದ ವಾಹನಚಲಾಯಿಸುವುದು ಸುರಕ್ಷಿತ ಎಂಬ ನಂಬಿಕೆಯಿದೆ. ಮತ್ತು ಹೆಚ್ಚಾಗಿ ಬಲಗೈ ಉಪಯೋಗ ಮಾಡುವುದರಿಂದ ವಾಹನ ನಿಯಂತ್ರಿಸೋದು ಸುಲಭವಾಗುತ್ತದೆ. ಬಲಭಾಗದಲ್ಲಿಯೇ ಕಾರಿನ ನಿಯಂತ್ರಣವಿಟ್ಟರೆ ಮುಂಬರುವ ವಾಹನಗಳ ಎದುರು ಸರಿಯಾಗಿ ವಾಹನ ಚಲಾಯಿಸಲು ಸಾಧ್ಯವಾಗುತ್ತದೆ.

Leave a Comment

Your email address will not be published. Required fields are marked *