ಸಮಗ್ರ ನ್ಯೂಸ್: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 10 ಮತ್ತು 12 ನೇ ತರಗತಿ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಿದೆ. results.cbse.nic.in, cbseresults.nic.in ಮತ್ತು digilocker.gov.in ಸೇರಿದಂತೆ ವಿವಿಧ ಅಧಿಕೃತ ವೆಬ್ಸೈಟ್ಗಳಲ್ಲಿ ಸಿಬಿಎಸ್‌ಇ ಫಲಿತಾಂಶಗಳು ಲಭ್ಯವಿದೆ.
ಆನ್ಲೈನ್ ಆಯ್ಕೆಗಳ ಜೊತೆಗೆ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಉಮಾಂಗ್ ಅಪ್ಲಿಕೇಶನ್, ಡಿಜಿಲಾಕರ್ ಅಪ್ಲಿಕೇಶನ್, ಎಸ್‌ಎಂಎಸ್ ಸೇವೆ, ಐವಿಆರ್ ಮತ್ತು ಪರೀಕ್ಷಾ ಸಂಗಮ್ ಮೂಲಕವೂ ಕೂಡ ಫಲಿತಾಂಶವನ್ನು ಪಡೆದುಕೊಳ್ಳಹುದಾಗಿದೆ.
ಡಿಜಿಲಾಕರ್ನಲ್ಲಿ ಸಿಬಿಎಸ್‌ಇ ಫಲಿತಾಂಶಗಳನ್ನು ಪರಿಶೀಲಿಸಲು, ಈ ಹಂತಗಳನ್ನು ಅನುಸರಿಸಿ:
ಡಿಜಿಲಾಕರ್ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಡಿಜಿಲಾಕರ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿ ಲಾಗ್ಇನ್ ಮಾಡಿ.
‘ಶಿಕ್ಷಣ’ ವಿಭಾಗವನ್ನು ಮತ್ತು ‘ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್’ ಅನ್ನು ಆಯ್ಕೆ ಮಾಡಿ.
ನಿಮ್ಮ ಸಿಬಿಎಸ್‌ಇ ರೋಲ್ ಸಂಖ್ಯೆ, ಶಾಲಾ ಕೋಡ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ.
‘ದಾಖಲೆ ಪಡೆಯಿರಿ’ ಬಟನ್ .
ನಿಮ್ಮ ಸಿಬಿಎಸ್‌ಇ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
ಭವಿಷ್ಯದ ಉಲ್ಲೇಖಕ್ಕಾಗಿ ಫಲಿತಾಂಶವನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.