Ad Widget .

ಹಳಿಯಾಳ: ಎರಡೂ ಕಾಲುಗಳನ್ನು ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ

ಸಮಗ್ರ ನ್ಯೂಸ್: ವ್ಯಕ್ತಿಯೊಬ್ಬರ ಎರಡು ಕಾಲುಗಳನ್ನು ಮಚ್ಚಿನಿಂದ ಕತ್ತರಿಸಿ, ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಕರಲಕಟ್ಟ ಗ್ರಾಮದ ಬಳಿ ನಡೆದಿದೆ.

Ad Widget . Ad Widget .

ಕೊಲೆಯಾದ ವ್ಯಕ್ತಿಯನ್ನು 52 ವರ್ಷದ ಪರಶುರಾಮ ತೋರಸ್ಕರ ಎಂದು ಗುರುತಿಸಲಾಗಿದ್ದು, ಆಸ್ತಿ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

Ad Widget . Ad Widget .

ಕೊಲೆಯಾದ ಪರುಶುರಾಮ 2021ರಲ್ಲಿ ಕರಲಕಟ್ಟ ಗ್ರಾಮದ ಬಳಿ ಆಸ್ತಿ ಖರೀದಿ ಮಾಡಿದ್ದರಂತೆ. ಇದೇ ಆಸ್ತಿಯನ್ನ ಪರುಶರಾಮ ಅವರು ಖರೀದಿಸುವ ಮುನ್ನ ಕೆಲ ವರ್ಷದಿಂದ ಗೇಣಿ ರೂಪದಲ್ಲಿ ಸಹದೇವ್ ದಡ್ಡೇಕರ್ ಎಂಬ ವ್ಯಕ್ತಿ ಉಳುಮೆ ಮಾಡುತ್ತಿದ್ದರಂತೆ.

ಆಸ್ತಿ ಖರೀದಿ ಆದಮೇಲೆ ಸಹದೇವ್ ದಡ್ಡೇಕರ್ ಮತ್ತು ಪರುಶರಾಮ್ ನಡುವೆ ನಿರಂತರ ಕಲಹ ಏರ್ಪಟ್ಟಿದೆ. ಆಸ್ತಿ ಖರೀದಿ ಬಳಿಕ ಜಮೀನ ಬಳಿ ತೆರಳಿದರೆ ದಡ್ಡೇಕರ್ ಈ ಆಸ್ತಿ ತನ್ನದೇ ಎಂದು ಹಗೆ ಸಾಧಿಸುತ್ತಿದ್ದನಂತೆ. ಆದರೆ ಆಸ್ತಿ ಖರೀದಿಯ ಅಧಿಕೃತ ಕಾಗದ ಪತ್ರ ಮಾತ್ರ ಪರಶುರಾಮ ಬಳಿ ಇತ್ತು ಎನ್ನಲಾಗಿದೆ.

ಈ ಸಂಬಂಧ ಇಂದು ಮತ್ತೆ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದ್ದು, ಘಟನೆ ಬಳಿಕ ಸಹದೇವ್ ದಡ್ಡೇಕರ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *