ಸಮಗ್ರ ನ್ಯೂಸ್: ರಸೆಲ್ಸ್ ವೈಪರ್ ನಾಲ್ಕು ಅಡಿ ಉದ್ದದವರೆಗೆ ಬೆಳೆಯುವ ಹಾವು. ಈ ಹಾವಿನ ಬಾಯಿ ಕೇವಲ 2 ಇಂಚು ಉದ್ದ ಮತ್ತು ಅಗಲವಿದ್ದು, ಇದು ಕಚ್ಚಿದ 10 ಸೆಕೆಂಡುಗಳಲ್ಲಿ ರಕ್ತ ಹೆಪ್ಪುಗಟ್ಟಲು ಪ್ರಾರಂಭವಾಗುತ್ತದೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದ್ದು, ನಮ್ಮ ದೇಶದಲ್ಲೂ ಕಾಣಸಿಗುತ್ತದೆ. ಈ ಹಾವು ಕಚ್ಚಿದರೆ ನೀವು 10 ಸೆಕೆಂಡುಗಳಲ್ಲಿ ಸಾಯುದು ಖಚಿತ. ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ರಸ್ಸೆಲ್ ಕೂಡ ಒಂದು. ಈ ಹಾವು ನಮ್ಮ ದೇಶದಲ್ಲೂ ಇದೆ.

ಬಿಹಾರದ ಸರನ್ ಜಿಲ್ಲೆಯ ಗರ್ಖಾ ಬ್ಲಾಕ್‌ನ ಮೊಹಮ್ಮದಾ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಅಪಾಯಕಾರಿ ಹಾವೊಂದು ಕಾಣಿಸಿಕೊಂಡಿದೆ. ಇದು ಹೆಣ್ಣು ಹೆಬ್ಬಾವಿನಂತಿರುವ ರಸ್ಸೆಲ್ ವೈಪರ್ ಶಾಲೆಯಲ್ಲಿ ಸಂಚರಿಸುತಿತ್ತು. ಗುಂಡಿಯಿಂದ ಹೊರಬಂದ ನಂತರ ಹಾವು ಹಲವು ದಿನಗಳಿಂದ ಅಲ್ಲೇ ಸುತ್ತುತ್ತಿತ್ತು. ಇದನ್ನು ಗಮನಿಸಿದ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿ ಪಡೆದ ತಕ್ಷಣ ಅರಣ್ಯ ಇಲಾಖ ಸಿಬ್ಬಂದಿ ಕಿಟ್ ಸಮೇತ ಶಾಲೆಗೆ ಆಗಮಿಸಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಭೂಮಿಯನ್ನು ಅಗೆದು ಹಾವನ್ನು ಹೊರತೆಗೆಯಲಾಗಿದ್ದು, ಅದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯ ಪ್ರಕಾರ ಇದು ವಿಶ್ವದ ಮೂರನೇ ಅತ್ಯಂತ ಅಪಾಯಕಾರಿ ಹಾವು. ಇದರ ಕಡಿತವು ತ್ವರಿತ ಸಾವಿಗೆ ಕಾರಣವಾಗುವುದು. ಈ ಹಾವಿನ ವಿಷದಲ್ಲಿ ಹೆಮೊಟಾಕ್ಸಿನ್ ಪ್ರಮಾಣ ಅಧಿಕವಾಗಿರುವುದರಿಂದ ಹೆಬ್ಬಾವು ಎಂದು ಜನರು ಭಾವಿಸಿರುವ ಇದು ಅಪಾಯಕಾರಿ ರಸ್ಸೆಲ್ ವೈಪರ್ ಹಾವಾಗಿದೆ. ಹೆಣ್ಣು ರಸ್ಸೆಲ್ ವೈಪರ್ ಒಂದು ಸಮಯದಲ್ಲಿ 40 ಮರಿಗಳಿಗೆ ಜನ್ಮ ನೀಡಬಹುದುದಾಗಿದೆ. ಇದರ ಕಡಿತಕ್ಕೆ ಒಳಗಾದ ಅಂಗಗಳು ವೇಗವಾಗಿ ಕೊಳೆಯುತ್ತವೆ. ಅಲ್ಲದೇ, ಒಬ್ಬ ವ್ಯಕ್ತಿಯು ಅದರ ಕಡಿತದಿಂದ ಬದುಕುಳಿದರೂ, ಆತ ಅಂಗವಿಕಲನಾಗುವುದು ಖಚಿತ.