ಮತದಾನ ದಿನದಂದು ಒಂಟಿಯಾದ ಸಚಿವ ಎಸ್.ಅಂಗಾರ

ಸಮಗ್ರ ನ್ಯೂಸ್: ಎಸ್.ಅಂಗಾರ ಸುಳ್ಯದ ಶಾಸಕ ಹಾಗೂ ಬಂದರು, ಮೀನುಗಾರಿಕಾ ಸಚಿವ. ಆದರೆ ಕೆಲ ದಿನಗಳ ಹಿಂದಿನ ಬೆಳವಣಿಗೆಗಳು ಸಚಿವ ಎಸ್‌.ಅಂಗಾರರನ್ನು ಒಬ್ಬಂಟಿಯಾಗಿಸಿದೆ. ಹೊರಗೆ ಹೊರಟಾಗ ಜೊತೆಗಿರುತ್ತಿದ್ದ ಕಾರ್ಯಕರ್ತರು ಇದೀಗ ಅಂಗಾರರನ್ನು ಒಂಟಿಯಾಗಿರಿಸಿದ್ದಾರೆ.

Ad Widget ... ..

ಹೌದು. ನಿನ್ನೆ(ಮೇ.10) ಸಾರ್ವತ್ರಿಕ ಮತದಾನದ ದಿನದಂದು ಸಚಿವ ಎಸ್.ಅಂಗಾರ ತಮ್ಮ ಹಕ್ಕು ಚಲಾವಣೆಗಾಗಿ ಸುಳ್ಯ ತಾಲೂಕಿನ ದೊಡ್ಡತೋಟದ ಮತಗಟ್ಟೆಗೆ ಬಂದಿದ್ರು. ಸಚಿವರು ತಮ್ಮ ಕುಟುಂಬ ಸಮೇತರಾಗಿ ಬಂದಿದ್ದರೂ ಅವರನ್ನು ಮಾತನಾಡಿಸಲು ಬಿಜೆಪಿ ಪಕ್ಷದ ಕಾರ್ಯಕರ್ತರೇ ಇರಲಿಲ್ಲ. ಕೊನೆಗೆ ಕಾಂಗ್ರೆಸ್ ನ ಕಾರ್ಯಕರ್ತರೋರ್ವರು ಅಂಗಾರರನ್ನು ಮಾತನಾಡಿಸಿ ಮತಗಟ್ಟೆವರೆಗೂ ಜೊತೆಯಾದರು.

Ad Widget

ಆರೋಗ್ಯ ಸಮಸ್ಯೆ ಮತ್ತು ವೈಯಕ್ತಿಕ ಕಾರಣಗಳಿಂದ ಈ ಬಾರಿ ಸಚಿವ ಎಸ್.ಅಂಗಾರ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿರಲಿಲ್ಲ. ಬಿಜೆಪಿ ಟಿಕೆಟ್ ನಿಂದ ವಂಚಿತರಾಗಿ ರೆಬಲ್ ಆಗಿದ್ದ ಅಂಗಾರ ಬಳಿಕ ಹೈಕಮಾಂಡ್ ಮುಂದೆ ಶರಣಾಗಿದ್ದರು. ಅದಾದ ಬಳಿಕ ಆರೋಗ್ಯ ಕೈಕೊಟ್ಟು ಆಸ್ಪತ್ರೆಗೆ ದಾಖಲಾದರು. ಒಟ್ಟಾರೆ ಎಸ್. ಅಂಗಾರ ಇದೀಗ ಒಬ್ಬಂಟಿಯಾಗಿರುವುದು ನಿಜಕ್ಕೂ ಬೇಸರದ ಸಂಗತಿ.

Leave a Comment

Your email address will not be published. Required fields are marked *