Ad Widget .

ಮೊದಲ ಬ್ಯಾಟ್ ನಲ್ಲೆ ಸಿಕ್ಸರ್ ಬಾರಿಸುತ್ತಾರ “ಪುತ್ತಿಲ”

ಊರು ಕೇರಿಯಲ್ಲೂ ಅಬ್ಬರದ ಪ್ರಚಾರ, ಗಲ್ಲಿ ಓಣಿಗಳಲ್ಲೂ ಕೇಳಿ ಬಂತು ಡಂಗೂರ, ಆರೋಪ ಪ್ರತ್ಯಾರೋಪಗಳನ್ನೆಲ್ಲ ನೋಡಿದ ಮತದಾರ ಕೊನೆಗೂ ಅದಕ್ಕೊಂದು ಅಂತಿಮ‌ ಮುದ್ರೆ ಒತ್ತಿದ್ದಾನೆ. ಇನ್ನೇದ್ದರು ಸೋಲು – ಗೆಲುವಿನ ಲೆಕ್ಕಚಾರ. ದೇಶದ ಹಿತದೃಷ್ಟಿಯಿಂದ ಮತ ಚಲಾಯಿಸುವ ಮತದಾರ ಬಂಧುಗಳು ಒಂದು ಕಡೆಯಾದರೆ ಬೆಲೆ ಏರಿಕೆ ಮತ್ತು ತಮ್ಮ ಲಾಭವನ್ನು ಲೆಕ್ಕಚಾರ ಹಾಕುವ ಮತದಾರರು ಮತ್ತೊಂದು ಕಡೆ. ಇನ್ನು ಕೆಲವರು ಎಣ್ಣೆ, ನೋಟುಗಳ ಹಿಂದೆ ಹೋಗಿ ಹಕ್ಕನ್ನು ಮಾರಿಕೊಳ್ಳುವ ಮೂರ್ಖರು ಸಹ ಇದೀಗ ಗದ್ದುಗೆ ಯಾರಿಗೆ ಎಂಬ ಅಂಕಿ ಅಂಶಗಳ ಕಾಗುಣಿತದಲ್ಲಿ ಕಾರ್ಯ ನಿರತರಾಗಿದ್ದಾರೆ.

Ad Widget . Ad Widget .

ಈ ವರ್ಷದ ವಿಧಾನ ಸಭಾ ಚುನಾವಣೆಯಲ್ಲಿ ಬಹಳ ಸದ್ದು ಮಾಡಿದ್ದು ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ. ಇಲ್ಲಿ ಎಂಟು ವಿಧಾನ ಸಭಾ ಕ್ಷೇತ್ರಗಳಿದ್ದು ಆ ಪೈಕಿ ಉಳ್ಳಾಲ ಹೊರತು ಪಡಿಸಿ ಉಳಿದೆಲ್ಲ ಕಡೆ ಕಳೆದ ಬಾರಿ ಕಮಲ ಅರಳಿತ್ತು. ಈ ಬಾರಿ ಮತ್ತೆ ಅದೇ ಗಿಡದಲ್ಲಿ ಕಮಲ ಅರಳಿಸಲು ಮುಂದಾದ ಭಾರತೀಯ ಜನತಾ ಪಾರ್ಟಿ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿದೆ. ಈ ಬಾರಿಯಾದರೂ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಪುತ್ತೂರಿನ ಹಿಂದು ಪಯರ್ ಬ್ರಾಂಡ್‌ ಎಂದೇ ಕರೆಯಲ್ಪಡುವ ಅರುಣ್ ಕುಮಾರ್ ಪುತ್ತಿಲ ರವರಿಗೆ ಟಿಕೆಟ್ ಕೈ ತಪ್ಪಿದ ಕಾರಣ ಬಿಜೆಪಿ ಎದುರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

Ad Widget . Ad Widget .

ಪುತ್ತೂರಿನ ಇತಿಹಾಸದಲ್ಲೆ ಮೊದಲ ಬಾರಿಗೆ ಒಬ್ಬ ಪಕ್ಷೇತರ ಅಭ್ಯರ್ಥಿ ಸಾವಿರಾರು ಅಭಿಮಾನಿಗಳನ್ನೊಳಗೊಂಡು ಪ್ರತಿ ಬೂತ್ ಮಟ್ಟದಲ್ಲಿಯೂ ಪ್ರಚಾರ ಮಾಡಿದ ಪುತ್ತಿಲರು ಇಡೀ ರಾಜ್ಯದಲ್ಲೆ ಗಮನ ಸೆಳೆಯವಂತ ಅಭ್ಯರ್ಥಿಯಾಗಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಸ್ವಾಮೀಜಿಗಳ ಮಾರ್ಗದರ್ಶನದ ಪಡೆದು ಪಕ್ಷೇತರ ಅಭ್ಯರ್ಥಿಯಾಗಿ ಪುತ್ತೂರಿನಿಂದ ಸ್ವರ್ಧಿಸಿರುವ ಅವರು ವಿಜಯದ ಪತಾಕೆ ಹಾರಿಸುವರು ಎಂಬ ವಿಶ್ವಾಸದೊಂದಿಗೆ ಪುತ್ತೂರಿನ 90% ಹಿಂದೂ ಕಾರ್ಯಕರ್ತರಿದ್ದಾರೆ.

ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ರು ಕೂಡ ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಾರ್ಟಿಗೆ ವಿರೋಧ ಮಾತನಾಡದ ಅರುಣ್ ಕುಮಾರ್ ಬಹಳ ನಾಜೂಕಾಗಿಯೇ ಬಿಜೆಪಿ ಪರವಾಗಿದ್ದ ಮತವನ್ನು ಸೆಳೆದಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತ ಗೆಲುವಿನ ವಿಶ್ವಾಸದಲ್ಲಿರುವ ಕಾಂಗ್ರೆಸ್ ಕೂಡ ಬೇರೆಯದ್ದೆ ಲೆಕ್ಕಚಾರ ಹಾಕಿದ್ದು ಮುಸ್ಲಿಂ ಮತಗಳೆಲ್ಲವೂ ಕಾಂಗ್ರೆಸ್ ಪಾಲಾಗಿದೆ ಎಂದು ಸಮಧಾನ ಮಾಡಿಕೊಂಡಿದೆ. ಆದರೆ ಅಲ್ಲಿ ಮುಸ್ಲಿಂ ಮತಗಳು ಮೂರು ಭಾಗವಾಗಿ ಪರಿವರ್ತನೆಯಾಗಿದ್ದು ಬಿಜೆಪಿಯ ಮತಗಳು ಹಿಂದುತ್ವ ಆಧಾರದ ಮೇಲೆ ಕೇಶರಿ ತೊಟ್ಟಿರುವ ಪುತ್ತಿಲರ ಬುಟ್ಟಿಗೆ ಬಿದ್ದಿವೆ.

ಪುತ್ತೂರಿಗೆ ಪುತ್ತಿಲ ಎಂಬ ಘೋಷ ವಾಕ್ಯದೊಂದಿಗೆ ಕದನಕ್ಕಿಳಿದ ಅವರ ಅಭಿಮಾನಿಗಳು ತಂಡೋಪಾದಿಯಲ್ಲಿ ಊರೆಲ್ಲ ಸುತ್ತಾಡಿ ಮತಯಾಚಿಸಿದ್ದಾರೆ. ರಾತ್ರಿ ಗಂಟೆ 12 ರ ನಡುವೆಯೂ ಬೂತ್ ಗೆ ತೆರಳಿದ ಪುತ್ತಿಲರು ಬ್ಯಾಟ್ ಚಿಹ್ನೆಗೆ ಮತ ನೀಡಿ ಎಂದು ಕೇಳಿಕೊಂಡದ್ದಾರೆ. ಒಬ್ಬ ಪಕ್ಷೇತರ ಅಭ್ಯರ್ಥಿ ಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆಂದರೆ ಅವರ ಸಾಧು ಸ್ವಭಾವ ಕಾರಣ, ಅವರಲ್ಲಿರುವ ಒಳ್ಳೆಯ ಗುಣ ಇಲ್ಲಿ ತನಕ ತಲುಪಿಸಿದೆ ಎನ್ನಬಹುದು. ಒಂದು ವೇಳೆ ಅವರು ಗೆಲುವು ಸಾಧಿಸಿದರೆ ಪುತ್ತೂರಿನ ಇತಿಹಾಸದಲ್ಲಿ ಇದು ಸುವರ್ಣಕ್ಷರದಲ್ಲಿ ಬರೆದಿಡಬೇಕಾದ ಹಸ್ತಕ್ಷರವೂ ಹೌದು.

ಸಣ್ಣ ಪ್ರಮಾಣದಲ್ಲಿ ಅತ್ತ ಕಾಂಗ್ರೆಸ್ ಗೆದ್ದು ಬಂದರೆ ಅಚ್ಚರಿಯೇನಿಲ್ಲ ಯಾಕೆಂದರೆ ಬಿಜೆಪಿಯ ಮತಗಳನ್ನು ಕಳೆದುಕೊಂಡು ಸೋಲಾನಿಭವಿಸಲು ಕಾರಣ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹಾಗೂ ಎಲುಬಿಲ್ಲದ ನಾಲಗೆ ಹರಿಬಿಟ್ಟ ಕಟ್ಟ ಹಿಂದುತ್ವವಾದಿಗಳ ಮಾತಿನ‌ ಚಾಟಿ. ಅರುಣ್ ಕುಮಾರ್ ಪುತ್ತಿಲರು ಹೋದಲೆಲ್ಲ ಕೇಶರಿ ಬಾವುಟ ಹಾರಡುತ್ತಿತ್ತು, ಅವರ ಅಭಿಮಾನಿಗಳ ಹೆಗಲ ಮೇಲೆ ಕೇಶರಿ ಶಾಲು ರಾರಜಿಸುತ್ತಿತ್ತು ಇದನ್ನೆಲ್ಲ‌ ಕಂಡು ಕಣ್ಣು ಕೆಂಪಾಗಾಗಿಸಿದ ಕೆಲವರು ಅವರು ಪರವಾಗಿ ಇಲ್ಲ ಸಲ್ಲದ ಮಾತುಗಳನ್ನಾಡಿ ತಮ್ಮ‌ ಮತ ಬುಟ್ಟಿಗೆ ಬೀಳುವ ಮತಗಳನ್ನು ಸಹ ಕಳೆದುಕೊಂಡಿದ್ದಾರೆನ್ನಬಹುದು. ಪುತ್ತಿಲರು ಸೋತು ಕಾಂಗ್ರೇಸ್ ಗೆಲುವಿನ ನಗೆ ಬೀರಿದರೆ ಒಂದು ಲೆಕ್ಕಚಾರದಲ್ಲಿ ರಾಷ್ಟ್ರೀಯ ಪಕ್ಷವನ್ನು ಸೋಲಿಸುವ ತಾಕತ್ತು ಪುತ್ತೂರಿನಲ್ಲಿ ಕೇವಲ ಪುತ್ತಿಲರಿಗೆ ಮಾತ್ರ ಅಂತನೆ ಬಣ್ಣಿಸಬಹುದು

ಹರೀಶ್ ಪುತ್ತೂರು.
ಯುವ ಬರಹಗಾರರು

Leave a Comment

Your email address will not be published. Required fields are marked *