ಸಮಗ್ರ ನ್ಯೂಸ್: ಎರಡ್ಮೂರು ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ, ಗುತ್ತಿಗಾರು, ಪೇಟೆಯಲ್ಲಿ ಬೆತ್ತಲೆ ಓಡಾಡುತ್ತ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಯನ್ನು ಅಮರ ಚಾರಿಟೇಬಲ್ ಟ್ರಸ್ಟ್ ವತಿಯ ಊರಿಗೆ ಕಳುಹಿಸಿದ ಘಟನೆ ವರದಿಯಾಗಿದೆ.
ಆ ವ್ಯಕ್ತಿಯನ್ನು
ಕೊಪ್ಪಳ ಮೂಲದ ಮಹೇಶ್ ಎಂದು ಗುರುತಿಸಲಾಗಿದೆ. ಈತ ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯ ಪೇಟೆಯಲ್ಲಿ ಬೆತ್ತಲೆ ಓಡಾಡುತಿದ್ದ ವ್ಯಕ್ತಿ ನಂತರ ಗುತ್ತಿಗಾರು ಪೇಟೆಗೆ ಆಗಮಿಸಿ ಬೆತ್ತಲೆ ಓಡಾಡುತಿದ್ದರು. ಈ ಸಂದರ್ಭದಲ್ಲಿ ಅವರನ್ನು ಜೀಪ್ ಚಾಲಕರದ, ವಿನಯ್ ಮಾಡಬಾಕಿಲು, ಕುಶಾಲಪ್ಪ ಕುಳ್ಳಾಜೆ, ಜಗದೀಶ್ ಕಾರ್ಜ, ನೀಲಪ್ಪ ಗೌಡ ಪೈಕ, ವೆಂಕಟ್ ರವರು ಮನವೊಲಿಸಿ ಮಾಹಿತಿ ಕಲೆ ಹಾಕಿದ್ದರು. ಬಳಿಕ ಆ ವ್ಯಕ್ತಿ ಮತ್ತೆ ಸ್ಥಳೀಯ ಮನೆಗಳ ಬಾಗಿಲು ಬಡಿದು ಕೀಟಲೆ ಮಾಡಿದ್ದು ತಿಳಿದು ಬಂದಿತ್ತು. ಮರುದಿನ ಆ ವ್ಯಕ್ತಿ ಯನ್ನು ಅಮರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚಂದ್ರಶೇಖರ ಕಡೋಡಿ ಅವರು ಹೆಚ್ಚಿನ ಮಾಹಿತಿ ಕಲೆ ಹಾಕಿ ಎಸ್ ಐ ಅವರ ಸಹಾಯ ಪಡೆದು ಅವರ ಊರಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ವ್ಯಕ್ತಿ ಗೆ ಸಂಪೂರ್ಣ ಹೊಸ ಬಟ್ಟೆಯನ್ನು ಸುಬ್ರಹ್ಮಣ್ಯ ಠಾಣಾಧಿಕಾರಿ ನೀಡಿದರೆ, ಗುತ್ತಿಗಾರಿನ ಉದ್ಯಮಿ ದೇವಿಪ್ರಸಾದ್ ಚಿಕ್ಮಳಿ ಆ ವ್ಯಕ್ತಿ ಊರಿಗೆ ತಲುಪಲು ವಾಹನದ ವ್ಯವಸ್ಥೆ ಮಾಡಿದರು. ವಾಹನ ಚಾಲಕರಾಗಿ ರವೀಂದ್ರ ಪೈಕ ಸಹಕರಿಸಿದ್ದರು. ಟ್ರಸ್ಟ್ ಮತ್ತು ಚಂದ್ರಶೇಖರ ಕಡೋಡಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.