Ad Widget .

ಚಿಕಿತ್ಸೆಗೆಂದು ಬಂದ ವೈದ್ಯೆಯನ್ನೇ ಇರಿದು ಕೊಲೆಗೈದ ರೋಗಿ

ಸಮಗ್ರ ನ್ಯೂಸ್: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಕೌಟುಂಬಿಕ ಘರ್ಷಣೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ, ಆ ವ್ಯಕ್ತಿ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಳನ್ನೇ ಇರಿದು ಕೊಂದಿದ್ದಾನೆ.

Ad Widget . Ad Widget .

ಬುಧವಾರ(ಮೇ.10) ಬೆಳಗ್ಗೆ ಕುಟುಂಬಸ್ಥರು ತನ್ನ ಥಳಿಸಿ ಸಾಯಿಸುತ್ತಿದ್ದಾರೆ, ರಕ್ಷಿಸಿ ಎಂದು ಕೊಟ್ಟಾರಕ್ಕರ ಪೊಲೀಸರಿಗೆ ದೂರವಾಣಿ ಕರೆ ಬಂದಿದೆ. ಅದ್ರಂತೆ, ಪೊಲೀಸರು ಆತನ ಮನೆಗೆ ಹೋಗಿದ್ದು, ಕಲಹದಲ್ಲಿ ಗಾಯಗೊಂಡಿದ್ದ ಸಂದೀಪ್’ನನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆಗ ಕರ್ತವ್ಯದಲ್ಲಿದ್ದ 23 ವರ್ಷದ ವೈದ್ಯೆ ವಂದನಾ ದಾಸ್ ಆತನ ಕಾಲಿನ ಗಾಯಕ್ಕೆ ಬ್ಯಾಂಡೇಜ್ ಹಾಕುವಾಗ, ಏಕಾಏಕಿ ರೊಚ್ಚಿಗೆದ್ದ ಆ ವ್ಯಕ್ತಿ, ಆಕೆಯ ಮೇಲೆ ಕತ್ತರಿ ಹಾಗೂ ಸರ್ಜಿಕಲ್ ಬ್ಲೇಡ್’ನಿಂದ ಹಲ್ಲೆ ನಡೆಸಿದ್ದಾನೆ. ಆ ವೈದ್ಯೆ ಕಾಪಾಡಿ ಎಂದು ಕಿರುಚುತ್ತಾ ಕೊಠಡಿಯಿಂದ ಹೊರಗೆ ಓಡಿ ಹೋದ್ರೂ, ಬೆನ್ನಟ್ಟಿದ ಸಂದೀಪ್, ವೈದ್ಯೆಳನ್ನೇ ಕತ್ತರಿ ಚುಚ್ಚಿ ಕೊಂದಿದ್ದಾನೆ.

Ad Widget . Ad Widget .

ವೈದ್ಯರ ಕೊಠಡಿಯ ಹೊರಗಿದ್ದ ಪೊಲೀಸರು ವ್ಯಕ್ತಿಯನ್ನ ತಡೆಯಲು ಯತ್ನಿಸಿದರೂ ತಡೆಯಲು ಸಾಧ್ಯವಾಗಲಿಲ್ಲ. ಈ ವೇಳೆ ಕೆಲ ಪೊಲೀಸರಿಗೂ ಗಾಯಗಳಾಗಿದ್ದು, ಪ್ರಾಯಸದಿಂದ ಬಂಧಿಸಲಾಯಿತು. ಸಧ್ಯ ಶಾಲಾ ಶಿಕ್ಷಕ ಸಂದೀಪ್ ಅಮಾನತುಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯರ ಮೇಲೆ ಹಲ್ಲೆ ನಡೆಸಿದಾಗ ಆತ ಮದ್ಯದ ಅಮಲಿನಲ್ಲಿದ್ದರು ಎನ್ನಲಾಗಿದೆ. ಆದ್ರೆ, ಸಂದೀಪ್ ಸಿಟ್ಟಿಗೆದ್ದು ಡಾ.ವಂದನಾ ಮೇಲೆ ಏಕೆ ಹಲ್ಲೆ ನಡೆಸಿದ್ದಾನೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಡಾ.ವಂದನಾ ಅವರನ್ನ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ಘಟನೆ ಕೇರಳದಲ್ಲಿ ಸಂಚಲನ ಮೂಡಿಸಿದೆ. ಭಾರತೀಯ ವೈದ್ಯಕೀಯ ಸಂಘ (IMA), ರಾಜ್ಯ ಸರ್ಕಾರಿ ವೈದ್ಯರ ಸಂಘವು ದಾಳಿಯನ್ನ ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದೆ. ಇನ್ನು ಈ ಘಟನೆ ಬಗ್ಗೆ ಕೇರಳ ಸಿಎಂ ವಿಜಯನ್ ಕೂಡ ಆಘಾತ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *