Ad Widget .

ಕಡಬ: ಬಹಿರಂಗ ಪ್ರಚಾರ ಮುಗಿದರೂ ಬ್ಯಾನರ್ ಭರಾಟೆ

ಸಮಗ್ರ ನ್ಯೂಸ್: ಬಹಿರಂಗ ಪ್ರಚಾರಕ್ಕೆ ಮೇ.8ರಂದೇ ತೆರೆ ಬಿದ್ದರೂ ಹಲವು ಮತಗಟ್ಟೆಗಳ ಸುತ್ತಮುತ್ತ ಬ್ಯಾನರ್ ಗಳು ರಾರಾಜಿಸುತ್ತಿವೆ.

Ad Widget . Ad Widget .

ಕಡಬ ತಾಲೂಕಿನ ಹಲವು ಮತಗಟ್ಟೆಗಳ ಸುತ್ತಮುತ್ತ ವಿವಿಧ ಪಕ್ಷಗಳಿಂದ ಬ್ಯಾನರ್ ಅಳವಡಿಸಿ ಅಭ್ಯರ್ಥಿ ಪರ ಪ್ರಚಾರ ನಡೆಸಲಾಗುತ್ತಿತ್ತು. ಕೆಲವೆಡೆಗಳಲ್ಲಿ ವಿಚಕ್ಷಣ ದಳದವರು ಮತಕೇಂದ್ರಗಳಿಗೆ ತೆರಳಿ ಬ್ಯಾನರ್ ಗಳನ್ನು ತೆರವುಗೊಳಿಸಿದರು.

Ad Widget . Ad Widget .

ಕಡಬದ ಬೂತ್ ಸಂಖ್ಯೆ 90, 91 ರಲ್ಲಿ ಮತದಾರರು ಸಾಲುಗಟ್ಟಿ ನಿಂತಿದ್ದು, ಪಂಚಾಯತ್ ವತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿಲ್ಲ ಎಂಬ ಆರೋಪ ಕೇಳಿಬಂತು.

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಮತಗಟ್ಟೆಯ ಸಮೀಪ ರಸ್ತೆ ಬದಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬೂತ್ ಹಾಕಿ ತಮ್ಮ ಪಕ್ಷದ ಅಭ್ಯರ್ಥಿಗಳ ಬ್ಯಾನರ್ ಅಳವಡಿಸಿದ್ದರು. ಇದನ್ನು ಗಮನಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಹಾಗೂ ನೀತಿ ಸಂಘಟನೆಯ ಪ್ರಮುಖರು ತೆರವುಗೊಳಿಸುವಂತೆ ಸೂಚಿಸಿದರು.

ಇದರಿಂದ ಕೆಲ ಹೊತ್ತು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಿಚಲಿತಗೊಂಡರು. ಈ ನಡುವೆ ಪೊಲೀಸರು ತೆರ್ವುಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದುಬ್ಯಾನರ್ ಗಳು ದಿಢೀರ್ ಕಣ್ಮರೆಯಾಗಿದೆ.

ಒಟ್ಟಾರೆ ಮತದಾನ ಒಂದಿಷ್ಟು ಸಣ್ಣಪುಟ್ಟ ಅವ್ಯವಸ್ಥೆ ಹೊರತುಪಡಿಸಿ ಬಿರುಸಿನಿಂದ ಸಾಗುತ್ತಿದೆ.

Leave a Comment

Your email address will not be published. Required fields are marked *