ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲ ಪಕ್ಷಗಳವರೂ ಸಾಧ್ಯವಿರುವ ಎಲ್ಲ ತಂತ್ರಗಳನ್ನು ಮಾಡುತ್ತಿದ್ದು, ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆ ನಿಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಮೊರೆ ಹೋಗಿದ್ದಾರೆ.
2014ರ ಚುನಾವಣೆ ಸಮಯದಲ್ಲಿ ಗ್ಯಾಸ್ ಸಿಲಿಂಡರ್ಗೆ ಕೈ ಮುಗಿದಿದ್ದ ನರೇಂದ್ರ ಮೋದಿ, ಗ್ಯಾಸ್ ಬೆಲೆ ಏರಿಕೆಯನ್ನು ನೆನಪಿಸಿ ಮತವನ್ನು ಯಾಚಿಸಿದ್ದರು. ಇದೇ ತಂತ್ರಗಾರಿಕೆಯನ್ನು ಬಳಸಿಕೊಂಡು ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್, ಗ್ಯಾಸ್ ಸಿಲಿಂಡರ್ಗೆ ಹೂ ಹಾರ ಹಾಕಿ ಪೂಜೆ ಮಾಡಿದ್ದಾರೆ. ಗ್ಯಾಸ್ ಸಿಲಿಂಡರ್ಗೆ ಗಂಧದಕಡ್ಡಿ ಬೆಳಗಿ, ಮಂಗಳಾರತಿ ಮಾಡಿದ ಶಿವಕುಮಾರ್, ಕಾಂಗ್ರೆಸ್ ಕಚೇರಿಯ ಸಿಬ್ಬಂದಿಗೆ ತೀರ್ಥ ನೀಡಿದರು.