ಸಮಗ್ರ ನ್ಯೂಸ್: ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಾಯಕ ಶಿಖರ್ ಧವನ್ (57ರನ್, 47 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ಇನ್ನಿಂಗ್ಸ್‌ನ ಕೊನೆಯಲ್ಲಿ ಶಾರುಖ್ ಖಾನ್ (21 ರನ್, 8 ಎಸೆತ, 3 ಬೌಂಡರಿ, 1 ಸಿಕ್ಸರ್) ನೆರವಿನಿಂದ 7 ವಿಕೆಟ್‌ಗೆ 179 ರನ್ ಪೇರಿಸಿತು. ವರುಣ್ ಚಕ್ರವರ್ತಿ ತಮ್ಮ 4 ಓವರ್‌ಗಳ ಕೋಟಾದಲ್ಲಿ 26 ರನ್‌ಗೆ 3 ವಿಕೆಟ್ ಉರುಳಿಸಿ ಪಂಜಾಬ್ ಕಿಂಗ್ಸ್ ತಂಡದ ಅಬ್ಬರಕ್ಕೆ ನಿಯಂತ್ರಣ ಹೇರಿದರು. ಪ್ರತಿಯಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಾಯಕ ನಿತೀಶ್ ರಾಣಾ (51ರನ್, 38 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಆಂಡ್ರೆ ರಸೆಲ್ (42 ರನ್, 23 ಎಸೆತ, 3 ಬೌಂಡರಿ, 3 ಸಿಕ್ಸರ್) ಇನ್ನಿಂಗ್ಸ್ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 182 ರನ್ ಸಿಡಿಸಿ ಗೆಲುವು ಕಂಡಿತು.
ಕೊನೇ ಎರಡು ಓವರ್‌ಗಳಲ್ಲಿ ಕೆಕೆಆರ್ ತಂಡದ ಗೆಲುವಿಗೆ 26 ರನ್ ಬೇಕಿದ್ದವು. ಈ ಹಂತದಲ್ಲಿ ಪಂಜಾಬ್ ಕಿಂಗ್ಸ್ ಇನ್ನಷ್ಟು ಎಚ್ಚರಿಕೆಯ ದಾಳಿ ನಡೆಸಿದ್ದರೆ, ಗೆಲುವು ಖಂಡಿತಾ ಸಾಧ್ಯವಿತ್ತು.ಆದರೆ, ಸ್ಯಾಮ್ ಕರ್ರನ್ ಎಸೆದ 19ನೇ ಓವರ್‌ನಲ್ಲಿ ಆಂಡ್ರೆ ರಸೆಲ್ ಮೂರು ಅಬ್ಬರದ ಸಿಕ್ಸರ್‌ಗಳೊಂದಿಗೆ 20 ರನ್ ದೋಚಿದ್ದು, ಇಡೀ ಪಂಜಾಬ್ ಕಿಂಗ್ಸ್ ತಂಡದ ಪ್ಲ್ಯಾನ್‌ಅನ್ನು ಉಲ್ಟಾ ಮಾಡಿತು. ಇದರಿಂದಾಗಿ ಕೊನೇ ಓವರ್‌ನಲ್ಲಿ ಕೆಕೆಆರ್ ಗೆಲುವಿಗೆ 6 ರನ್ ಬೇಕಿದ್ದರೆ, ಈ ಮೊತ್ತವನ್ನು ರಕ್ಷಣೆ ಮಾಡುವ ಜವಾಬ್ದಾರಿ ಆರ್ಶ್‌ದೀಪ್ ಹೆಗಲಿಗೇರಿತು.
ಮೊದಲ ಎಸೆತದಲ್ಲಿ ರಸೆಲ್ ರನ್ ಬಾರಿಸಲು ವಿಫಲರಾದರೆ, 2 ಹಾಗೂ 3ನೇ ಎಸೆತದಲ್ಲಿ ರಸೆಲ್ ಹಾಗೂ ರಿಂಕು ತಲಾ ಒಂದೊಂದು ರನ್ ಬಾರಿಸಿದರು. ಮೂರನೇ ಎಸೆತದಲ್ಲಿ ರಸೆಲ್ ಎರಡು ರನ್‌ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಆದರೆ, 5ನೇ ಎಸೆತದಲ್ಲಿ ರಸೆಲ್‌ರನ್ನು ಪೆವಿಲಿಯನ್‌ಗಟ್ಟು ಮೂಲಕ ಆರ್ಶ್‌ದೀಪ್ ಪಂಜಾಬ್‌ಗೆ ಸಣ್ಣ ಆಸೆ ನೀಡಿದ್ದರು. ಕೊನೇ ಎಸೆತದಲ್ಲಿ 2 ರನ್ ಬೇಕಿದ್ದಾಗ, ಸೊಂಟದ ಮಟ್ಟಕ್ಕೆ ಫುಲ್‌ಟಾಸ್ ಎಸೆತವನ್ನು ಆರ್ಶ್‌ದೀಪ್ ಎಸೆದರು. ಇದನ್ನು ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಫ್ಲಿಕ್ ಮಾಡಿದ ರಿಂಕಿ ತಂಡಕ್ಕೆ ಗೆಲುವು ನೀಡಿದರು.10 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್‌ನೊಂದಿಗೆ21 ರನ್ ಬಾರಿಸಿ ರಿಂಕು ಅಜೇಯವಾಗುಳಿದರು.