Ad Widget .

ಬೆಳ್ತಂಗಡಿ: ದಲಿತ ಕಾಲೋನಿಗೆ ಹಣ ಹಂಚಲು ಹೋದ ಹರೀಶ್ ಪೂಂಜಾಗೆ ಘೇರಾವ್!?

ಸಮಗ್ರ ನ್ಯೂಸ್: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರು ಮನೆ ಮನೆ ಪ್ರಚಾರದ ವೇಳೆ ಹಣ ಹಂಚಿರುವ ಆರೋಪ ಕೇಳಿಬಂದಿದೆ. ಬೆಳ್ತಂಗಡಿಯಲ್ಲಿರುವ ಆಶೋಕ ನಗರದ ದಲಿತ ಕಾಲೋನಿಯೊಂದಕ್ಕೆ ಮತಯಾಚನೆಗೆ ಹೋದ ಸಂದರ್ಭ ಐದು ಲಕ್ಷ ರೂ. ಕೊಡುತ್ತೇನೆ ಎಂದು ಆಮಿಷವೊಡ್ಡಿರುವುದಾಗಿ ಹೇಳಲಾಗುತ್ತಿದೆ.

Ad Widget . Ad Widget .

ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರ ಮೇ 8 ರಂದು ಸಂಜೆ ಕೊನೆಯಾಗಿತ್ತು. ಈ ಹಿನ್ನಲೆಯಲ್ಲಿ ರಾತ್ರಿ ವೇಳೆ ಪೂಂಜ ಮತ್ತು ತಂಡದವರು ಮನೆ ಮನೆ ಪ್ರಚಾರ ಆರಂಭಿಸಿದ್ದರು. ದಲಿತ ಕಾಲೋನಿಯಲ್ಲಿ ನಿವಾಸಿಗಳಿಗೆಮನೆ ನಿರ್ಮಿಸಿ ಕೊಡುತ್ತೇವೆ, ಆರ್ ಟಿಸಿ ಮಾಡಿಕೊಡುತ್ತೀನಿ ಎನ್ನುವ ಆಮಿಷ ಒಡ್ಡಿದ್ದು ಇದರಿಂದ ರೊಚ್ಚಿಗೆದ್ದಿದ್ದ ಸ್ಥಳೀಯರು ಹರೀಶ್ ಪೂಂಜಗೆ ಘೇರಾವ್ ಹಾಕಿದ್ದಾರೆ.

Ad Widget . Ad Widget .

ಈ ವೇಳೆ ಸ್ಥಳೀಯರು ಮತ್ತವರ ತಂಡದ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳೀಯರ ಘೇರಾವ್ ಹಾಕುತ್ತಿದ್ದಂತೆಯೇ ಹರೀಶ್ ಮತ್ತವರ ಬೆಂಬಲಿಗರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *