Ad Widget .

ತಮಿಳುನಾಡಿನ ನಾಲ್ಕು ಜಿಲ್ಲೆಗಳಿಗೆ ಎನ್‍ಐಎ ದಾಳಿ

ಸಮಗ್ರ ನ್ಯೂಸ್: ಮೇ 09
ಮಂಗಳವಾರದಂದು ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಎನ್ಐಎ ದಾಳಿ ನಡೆಸಿದ ವೇಳೆ ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್‍ಐ ಪ್ರಕರಣದ ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ಎನ್‍ಐಎ ಪ್ರಕರಣ ದಾಖಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ, ಚೆನ್ನೈ, ದಿಂಡಿಗಲ್ ಮತ್ತು ಥೇಣಿ ಸೇರಿದಂತೆ ಆರು ಜಿಲ್ಲೆಗಳ ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಯುತ್ತಿದೆ. ಈ ಪ್ರಕರಣ ಸೆ. 19 ರಂದು ದಾಖಲಾದಾಗಿನಿಂದ ಇಲ್ಲಿಯವರೆಗೆ 10 ಜನರನ್ನು ಈ ಪ್ರಕರಣದಲ್ಲಿ ಬಂಧಿಸಲಾಯಿತು.

Ad Widget . Ad Widget . Ad Widget .

ಹಲವಾರು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು , ಆರೋಪಿಗಳು ಕೋಮು ಸೌಹರ‍್ದತೆಗೆ ಧಕ್ಕೆ ತರುವ ಚಟುವಟಿಕೆಯಲ್ಲಿ ತೊಡಗಿದ್ದು, ಅಲ್ಲದೆ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಯುವಕರ ಗುಂಪಿಗೆ ಮಾರಕಾಸ್ತ್ರಗಳನ್ನು ಬಳಕೆ ಮಾಡುವ ತರಬೇತಿ ನೀಡುತ್ತಿದ್ದಾರೆ ಎಂದು ಎನ್‍ಐಎ ಆರೋಪಿಸಿತ್ತು.

ರಾಜ್ಯದ ಪೊಲೀಸರು ಜೊತೆಗೆ ಎನ್‍ಐಎ ನಡೆಸಿದ ತನಿಖೆ ವೇಳೆಯಲ್ಲಿ ಪಿಎಫ್‍ಐ ಸಂಘಟನೆ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದು ಎಂದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್‌ನಲ್ಲಿ ಪಿಎಫ್‍ಐ ಹಾಗೂ ಅದರ ಅನೇಕ ಅಂಗಸಂಸ್ಥೆಗಳನ್ನು ಗೃಹ ಸಚಿವಾಲಯ, ಇದು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿ ನಿಷೇಧಿಸಿದೆ.

Leave a Comment

Your email address will not be published. Required fields are marked *