ಸಮಗ್ರ ನ್ಯೂಸ್: ವೋಟರ್ಸ್ ಸ್ಲಿಪ್ ಅನ್ನು ಮತದಾರರ ಮನೆಗೆ ತಲುಪಿಸುವ ವೇಳೆ ಬಿಜೆಪಿ ಪಕ್ಷದ ಪ್ರಚಾರದ ಕರಪತ್ರವನ್ನು ಕೂಡ ಜತೆಗೆ ವಿತರಿಸಿದ್ದಾರೆ ಎಂದು ಆರೋಪ ಕೇಳಿಬಂದಿದ್ದು ಬಿಎಲ್‌ಒಗಳಿಬ್ಬರ ಮೇಲೆ ತನಿಖೆ ನಡೆಸಲು ಸುಳ್ಯ ಚುನಾವಣಾಧಿಕಾರಿಗಳು ಆದೇಶಿಸಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜಾಲ್ಸೂರು ಗ್ರಾಮದ ಎರಡು ಬೂತ್ ಗಳಲ್ಲಿ ಬಿ.ಜೆ.ಪಿ.ಯ ಪ್ರಚಾರ ಸಾಮಾಗ್ರಿಯನ್ನು ವೋಟರ್ಸ್ ಸ್ಲಿಪ್ ನೊಂದಿಗೆ ಕೊಟ್ಟಿರುವುದಾಗಿ ಹೇಳಲಾಗಿದ್ದು ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾಧಿಕಾರಿಗಳು ಈ ಬಗ್ಗೆ ತನಿಖೆಗೆ ತಾ.ಪಂ. ಸಿಇಒಗೆ ಸೂಚನೆ ನೀಡಿದ್ದಾರೆ. ಇದೇ ಕ್ಷೇತ್ರದ ಅಮರಮುಡ್ನೂರು ಗ್ರಾಮದಲ್ಲೂ ಇಂತಹುದೇ ಪ್ರಕರಣ ನಡೆದಿರುವುದಾಗಿ ಹೇಳಲಾಗಿದೆ.