Ad Widget .

ಐಎಎಸ್ ಅಧಿಕಾರಿ ಕೊಲೆ ಪ್ರಕರಣ; ಕೈದಿ ರಿಲೀಸ್ ಖಂಡಿಸಿ ಬಿಹಾರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

ಸಮಗ್ರ ನ್ಯೂಸ್: ದರೋಡೆಕೋರ, ರಾಜಕಾರಣಿ ಆನಂದ್ ಮೋಹನ್ ಅವರನ್ನು ಅವಧಿಗೂ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು, ಸುಪ್ರೀಂ ಕೋರ್ಟ್ ಬಿಹಾರ ಸರ್ಕಾರಕ್ಕೆ ಮೇ 8ರಂದು ನೋಟಿಸ್ ಜಾರಿ ಮಾಡಿದೆ. ಸರಕಾರ ಎರಡು ವಾರಗಳಲ್ಲಿ ಉತ್ತರಿಸಬೇಕು ಎಂದು ನ್ಯಾಯಾಲಯಕ್ಕೆ ಎಚ್ಚರಿಕೆ ನೀಡಿದೆ.

Ad Widget . Ad Widget .

ಐಎಎಸ್ ಅಧಿಕಾರಿ ಜಿ ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಆನಂದ್ ಮೋಹನ್‌ನನ್ನು ಬಿಹಾರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಕೃಷ್ಣಯ್ಯ ಪತ್ನಿ ಉಮಾ ಕೃಷ್ಣಯ್ಯ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು.

Ad Widget . Ad Widget .

ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಜೈಲು ಕೈಪಿಡಿಯನ್ನು ಇತ್ತೀಚೆಗೆ ತಿದ್ದುಪಡಿ ಮಾಡಿ 27 ಅಪರಾಧಿಗಳ ಬಿಡುಗಡೆಯಾಗಿತ್ತು. ಏ.27 ರಂದು ಆನಂದ್ ಮೋಹನನ್ನು ಬಿಡುಗಡೆ ಮಾಡಲಾಗಿತ್ತು. ಇದನ್ನು ಸುಪ್ರೀಂ ಗಮನಕ್ಕೆ ತಂದಿದ್ದ ಅರ್ಜಿದಾರರು ಆನಂದನನ್ನು ಬಿಡುಗಡೆ ಮಾಡುವ ಉದ್ದೇಶದಿಂದ ಕೈಪಿಡಿ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿದ್ದರು.

1994ರಲ್ಲಿ ಅಂದಿನ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿ. ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಆನಂದ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಈ ಹಿಂದೆ ಪುತ್ರ ಚೇತನ್ ಆನಂದ್ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು 15 ದಿನಗಳ ಪೆರೋಲ್‌ನಲ್ಲಿದ್ದ. ಪೆರೋಲ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಏ.26 ರಂದು ಸಹರ್ಸಾ ಜೈಲಿಗೆ ಮರಳಿದ್ದಾತ ಏ.27 ರಂದು ಬಿಡುಗಡೆಯಾಗಿದ್ದ.

1994 ರ ಡಿಸೆಂಬರ್ 5 ರಂದು ಮ್ಯಾಜಿಸ್ಟ್ರೇಟ್ ಕೃಷ್ಣಯ್ಯ ಅವರನ್ನು ಆನಂದ್ ಮೋಹನ್‌ನ ಪ್ರಚೋದನೆಗೆ ಒಳಗಾದ ಗುಂಪು ಥಳಿಸಿ ಕೊಂದಿತ್ತು. 2007 ರಲ್ಲಿ ವಿಚಾರಣಾ ನ್ಯಾಯಾಲಯವು ಆನಂದ್ ಮೋಹನ್‌ಗೆ ಮರಣದಂಡನೆ ವಿಧಿಸಿತ್ತು. ಒಂದು ವರ್ಷದ ನಂತರ ಪಾಟ್ನಾ ಹೈಕೋರ್ಟ್ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು. ನಂತರ ಮೋಹನ್ ಸುಪ್ರೀಂ ಕೋರ್ಟ್ ನಲ್ಲಿ ತೀರ್ಪನ್ನು ಪ್ರಶ್ನಿಸಿದ್ದರು. ಆದರೂ ಅರ್ಜಿಯ ವಿಚಾರಣೆ ನಡೆಯದೇ ಈತ 2007 ರಿಂದ ಸಹರ್ಸಾ ಜೈಲಿನಲ್ಲಿದ್ದ.

Leave a Comment

Your email address will not be published. Required fields are marked *