ಪುತ್ತೂರು: ಚುನಾವಣಾ ಹಿನ್ನೆಲೆಯಲ್ಲಿ ನಾಲ್ವರು ಹಿಂದೂ ಕಾರ್ಯಕರ್ತರ ಗಡಿಪಾರು

ಸಮಗ್ರ ನ್ಯೂಸ್: ಮೇ.10ರಂದು ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ನಾಲ್ಕು ಮಂದಿಯನ್ನು ಪುತ್ತೂರಿನಿಂದ ಗಡಿಪಾರು ಮಾಡಲಾಗಿದೆ.

Ad Widget ... ..

ಹಿಂದೂ ಸಂಘಟನೆ ಕಾರ್ಯಕರ್ತರಾಗಿರುವ ಬನ್ನೂರು ಮೂಲದ ಪ್ರಜ್ವಲ್, ಪ್ರತಾಪ್, ಜಗ್ಗ ಯಾನೆ ಅಚ್ಚು, ಅವಿನಾಶ್ ಅವರು ಗಡಿಪಾರು ಆಗಿದ್ದಾರೆ. ಈ ನಾಲ್ಕು ಮಂದಿ ಚುನಾವಣೆಯ ಸಂದರ್ಭ ಶಾಂತಿ ಭಂಗ ಮಾಡಬಹುದೆಂಬ ನಿಟ್ಟಿನಲ್ಲಿ ನಗರ ಠಾಣೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

Ad Widget

ಕೆಲವು ದಿನಗಳಿಂದ ಇವರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಇದೇ ಕಾರಣದಿಂದ ಈ ಗಡಿಪಾರಿಗೆ ಆದೇಶಿಸಲಾಗಿದೆ ಎನ್ನಲಾಗಿದೆ.

Leave a Comment

Your email address will not be published. Required fields are marked *