ಸಮಗ್ರ ನ್ಯೂಸ್: ಕಾಂಗೊದ ಪೂರ್ವಭಾಗದಲ್ಲಿ ಸಂಭವಿಸಿರುವ ಹಠಾತ್ ಪ್ರವಾಹ ಮತ್ತು ಭೂಕುಸಿತದ ಅವಘಡದಿಂದಾಗಿ ಸುಮಾರು 400 ಜನರು ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ. 394 ಜನರ ಶವ ಪತ್ತೆಯಾಗಿದೆ. ನಾಪತ್ತೆಯಾದವರಿಗೆ ಶೋಧ ಮುಂದುವರಿದಿದೆ.
ನ್ಯಾಮುಕುಬಿ ಗ್ರಾಮದಲ್ಲಿ ನೂರಾರು ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಸಿಕ್ಕಿ ಉಳಿದಿರುವವರ ರಕ್ಷಣೆಗೆ ಅವಶೇಷಗಳ ನಡುವೆ ತೀವ್ರ ಹುಡುಕಾಟ ನಡೆದಿದೆ. ಮಣ್ಣಿನಡಿಯೂ ಹಲವರು ಸಿಲುಕಿರುವ ಸಾಧ್ಯತೆಗಳಿವೆ.
ಧಾರಾಕಾರ ಮಳೆಯಿಂದಾಗಿ ನದಿ ಉಕ್ಕಿ ಹರಿದಿದ್ದು, ನದಿಪಾತ್ರದಲ್ಲಿದ್ದ ಗ್ರಾಮಗಳು ತೀವ್ರ ಪರಿಣಾಮಕ್ಕೆ ತುತ್ತಾಗಿವೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಪ್ರವಾಹ ಆವರಿಸಿತ್ತು. ಹಲವು ರಸ್ತೆಗಳು ಕೊಚ್ಚಿಹೋದವು ಎಂದರು.
ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಮಿಚಾಕೆ ಟಮಾನ ಅವರು, ಬದುಕುಳಿದವರು ತಮ್ಮವರ ಶವಗಳ ಹುಡುಕಾಟದಲ್ಲಿದ್ದಾರೆ. ಕೆಲವರು ಪ್ರವಾಹದಲ್ಲಿ ಕೊಚ್ಚಿಹೋಗಿರುವ ಸಾಧ್ಯತೆ ಇದೆ ಎಂದು ತಿಳಿಸಿದರು.