Ad Widget .

ಯುವಜನತೆಗೆ ಉದ್ಯೋಗ ಗ್ಯಾರಂಟಿ : ಸುಮನ ಬೆಳ್ಳಾರ್ಕರ್

ಸಮಗ್ರ ನ್ಯೂಸ್: ಕೃಷಿಕರನ್ನು ಬಾಧಿಸುತ್ತಿರುವ ಅಡಿಕೆ ಎಲೆ ಹಳದಿ ರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಹಾಗೂ ಸುಳ್ಯದ 110 ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಕಾಮಗಾರಿ ಮಾಡಿಸುವ ಉದ್ದೇಶದಿಂದ ಎ.ಎ.ಪಿ ಬದ್ಧವಾಗಿದ್ದು, ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದರೆ ಮೊದಲು ಇದನ್ನೇ ಮಾಡುತ್ತೇವೆ. ಅದಕ್ಕಾಗಿ ಯಾವ ಹೋರಾಟಕ್ಕೂ ನಾವು ಬದ್ಧರಾಗಿದ್ದು ಆ ಕೆಲಸವನ್ನು ಮಾಡಿಲು ಸಿದ್ಧ ಎಂದು ಎ.ಎ.ಪಿ. ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಹಾಗೂ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಹೇಳಿದ್ದಾರೆ.

Ad Widget . Ad Widget .

ಮೇ.9ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶೋಕ್ ಎಡಮಲೆಯವರು ಎಎಪಿ ಕರ್ನಾಟಕದಲ್ಲಿ ಕೆಲವು ಗ್ಯಾರಂಟಿಗಳ ಪ್ರಣಾಳಿಕೆಯಲ್ಲಿ ಹಾಕಿಕೊಂಡಿದ್ದು ಅಧಿಕಾರಕ್ಕೆ ಬಂದ ತಕ್ಷಣ ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದು. ಯಾವುದೇ ರಾಜಕೀಯ ಪಕ್ಷಗಳು 100 ಶೇಕಡ ಕೆಲಸ 0 ಶೇಕಡ ಕಮಿಷನ್ ಎಂಬುದನ್ನು ಯಾವ ಪಕ್ಷವು ಹೇಳಿಲ್ಲ. ಆದರೆ ನಾವು ಬದ್ಧರಾಗಿದ್ದೇವೆ. ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ಮತ್ತು ಅಗತ್ಯವಿರುವ ಬಜೆಟ್ ನೀಡಲಾಗುವುದು.

Ad Widget . Ad Widget .

ಗೃಹಬಳಕೆದಾರರಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್. ಪ್ರತಿ ಮನೆಗೆ 24×7ವಿದ್ಯುತ್ ಪೂರೈಕೆ. ಶಿಕ್ಷಣ ಗ್ಯಾರಂಟಿ ಯೋಜನೆಯಡಿಯಲ್ಲಿ ದೆಹಲಿಯಂತೆ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳನ್ನು ಉತ್ತಮವಾಗಿಸಿ, ಉನ್ನತ ಶಿಕ್ಷಣದ ಬ್ಯಾಂಕ್ ಸಾಲಗಳಿಗೆ ಸರಕಾರದಿಂದ ಗ್ಯಾರಂಟಿ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಸಾರಿಗೆ ವ್ಯವಸ್ಥೆ. ಖಾಸಗಿ ಶಾಲೆಗಳಿಗೆ ಶುಲ್ಕವನ್ನು ನಿಗದಿಪಡಿಸಲು ಮತ್ತು ನಿಯಂತ್ರಿಸಲು ಶುಲ್ಕ ಸಮಿತಿಯ ರಚನೆ ಮಾಡಲಾಗುವುದು. ಗುತ್ತಿಗೆ ಶಿಕ್ಷಕರಿಗೆ ಕಾಯಂ ಕೆಲಸ. ಆರೋಗ್ಯ ಗ್ಯಾರಂಟಿಯಲ್ಲಿ ಮಾತ್ರೆಯಿಂದ ಶಸ್ತ್ರ-ಚಿಕಿತ್ಸೆವರೆಗೂ ಉಚಿತ. ಪ್ರಾಥಮಿಕ ಆರೈಕೆಗಾಗಿ ಪ್ರತೀ ಪ್ರದೇಶ ಮತ್ತು ಪಂಚಾಯತ್‌ನಲ್ಲಿ ದೆಹಲಿ ಮಾದರಿ ಮೊಹಲ್ಲಾ ಕ್ಲಿನಿಕ್ ನ ವ್ಯವಸ್ಥೆ.

ಯುವಕರಿಗೂ ಗ್ಯಾರಂಟಿಗಳನ್ನು ತರಲಾಗಿದ್ದು, ಅವರಿಗೆ ಉದ್ಯೋಗ ಗ್ಯಾರಂಟಿ. ಉದ್ಯೋಗ ಸಿಗುವವರೆ ತಿಂಗಳಿಗೆ ರೂ.3 ಸಾವಿರ ನಿರುದ್ಯೋಗ ಭತ್ಯೆ. 12ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಲು ತಿಂಗಳಿಗೆ ರೂ 5000 ಸ್ಟೈಫಂಡ್ ಹಾಗೂ 6 ತಿಂಗಳ ಉದ್ಯೋಗ ತರಬೇತಿ. ಮಹಿಳೆಯರಿಗಾಗಿ ಸರಕಾರಿ ಉದ್ಯೋಗದಲ್ಲಿ ಶೇ.33 ಮೀಸಲಾತಿ, ಉಚಿತ ಸಿಟಿಬಸ್ ಸಾರಿಗೆ, 18 ವರ್ಷ ಮೇಲ್ಪಟ್ಟ ಪ್ರತಿ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಾಸಿಕ ರೂ.1000 ಸಬಲೀಕರಣ ಭತ್ಯೆ, ರೈತರಿಗೆ ರೈತರು ವಿರೋಧಿಸುವ 3 ಕೃಷಿ ಕಾನೂನುಗಳನ್ನು ರದ್ದುಗೊಳಿಸಿ, ಸಾಮಾಜಿಕ ವೃದ್ಧಾಪ್ಯ ವೇತನ ಮಾಸಿಕ ರೂ 400 ರಿಂದ 1500 ಕ್ಕೆ ಹೆಚ್ಚಳ, ವಿಧವಾ ಪಿಂಚಣಿ ರೂ.800ರಿಂದ ರೂ 2ಸಾವಿರ ಹೆಚ್ಚಳ, ನಾಗರಿಕ ಸೇವೆಗಳ ಗ್ಯಾರಂಟಿ, ಉದ್ಯೋಗಕ್ಕಾಗಿ ಗ್ಯಾರಂಟಿಗಳ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಎಎಪಿ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ ಮಾತನಾಡಿ ನಾನು ಗ್ರಾಮೀಣ ಭಾಗದಲ್ಲಿ ಸುತ್ತಿದ್ದೇನೆ. ನನ್ನ ತಂದೆಯವರು ಶಾಸಕರಾಗಿದ್ದ ಸಂದರ್ಭದಲ್ಲಿ ಆದ ಕೆಲಸವನ್ನು ಜನರು ಈಗಲೂ ನೆನಪಿಸುತ್ತಿದ್ದಾರೆ. ಆದರೆ ಆ ಬಳಿಕದಲ್ಲಿ ಏನು ಕೆಲಸ ಕಾರ್ಯಗಳಾಗಿಲ್ಲ. ಕೆಲವು ಮನೆಗಳು ಸೀರೆಯ ಗೋಡೆ ಕಟ್ಟಿಕೊಂಡು ಇನ್ನೂ ಇದೆ. ಕೆಲವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ರಸ್ತೆ, ಸೇತುವೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸುಳ್ಯ ಮೀಸಲು ಕ್ಷೇತ್ರ. ಇಲ್ಲಿಗೆ ಹೆಚ್ಚು ಅನುದಾನ ಬರಬೇಕು. ಆದರೆ ಇಲ್ಲಿಯವರು ಅನುದಾನ ತರುವಲ್ಲಿ ಪ್ರಯತ್ನ ಮಾಡಿಸಿಲ್ಲ ಎಂದರು.

ಚುನಾವಣಾ ಉಸ್ತುವಾರಿ ಕಲಂದರ್ ಎಲಿಮಲೆ ಮಾತನಾಡಿ, ಈ ಬಾರಿ ಸುಳ್ಯದಲ್ಲಿ ಎಎಪಿಯನ್ನು ಪ್ರಚಾರದ ವೇಳೆಯಲ್ಲಿ ಜನರ ಉತ್ತಮ ಪ್ರತಿಕ್ರಿಯೆ ಇದೆ. ಮೇ.9ರಂದು ತಾಲೂಕಿನ ಪ್ರತಿ ನಗರ ವ್ಯಾಪ್ತಿಯಲ್ಲೂ ಪ್ರಚಾರ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Leave a Comment

Your email address will not be published. Required fields are marked *