Ad Widget .

ಸುಳ್ಯ: ಮೇ.16-18 ರವರೆಗೆ ಕೋಲ್ಚಾರು ತರವಾಡು ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ

ಸಮಗ್ರ ನ್ಯೂಸ್: ಇದೇ ಮೇ ತಿಂಗಳ 16ರಿಂದ 18ರವರೆಗೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರಿನಲ್ಲಿ ಕೋಲ್ಚಾರು ತರವಾಡು ಮನೆಯ ಶ್ರೀ ವಯನಾಟ್ ಕುಲವನ್ ದೇವಸ್ಥಾನದಲ್ಲಿ ದೈವಕಟ್ಟು ಮಹೋತ್ಸವವು ವಿಜೃಂಭಣೆಯಿಂದ ಜರುಗಲಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈಗಾಗಲೇ ಕಾರ್ಯಕ್ರಮದ ಪೂರ್ವಭಾವಿಯಾಗಿ ಧಾನ್ಯ ಅಳೆಯುವ ಕಾರ್ಯಕ್ರಮ ಎ. 26 ರಂದು‌ ನಡೆದಿದ್ದು, ದೇವಸ್ಥಾನದಲ್ಲಿ ಸಿದ್ದತೆಗಳು ಭರದಿಂದ ಸಾಗುತ್ತಿವೆ.

Ad Widget . Ad Widget . Ad Widget .

ಮೇ. 16ರಂದು ಬೆಳಿಗ್ಗೆ ಹಸಿರುವಾಣಿ ತರುವುದು, ಉಗ್ರಾಣ ತುಂಬುವ ಕಾರ್ಯಕ್ರಮ ನಡೆದು, ಕೈವೀದು ನಡೆಯಲಿದೆ. ಬಳಿಕ ಜನಸೇವಾ ಟ್ರಸ್ಟ್‌ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಎ.ಎಸ್ ನಿರ್ಮಲ ಕುಮಾರ್ ರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ.

ಮೇ.17ರಂದು ಭಂಡಾರ ತೆಗೆದು ಕಾರ್ನೋನ್, ಕೋರಚ್ಚನ್, ಕಂಡನಾರ ಕೇಳನ್ ದೈವಗಳ ವೆಳ್ಳಾಟಂ ನಡೆಯಲಿದೆ. ಬಳಿಕ ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್ ನಡೆದು, ವಯನಾಟ್ ಕುಲವನ್ ದೈವದ ವೆಳ್ಳಾಟಂ‌ ನಡೆಯಲಿದೆ.

ಮೇ.18ರಂದು ಕಾರ್ನೋನ್, ಕೋರಚ್ಚನ್, ಕಂಡನಾರಕೇಳನ್ ದೈವಗಳ‌ ಕೋಲ ನಡೆದು, ಬಳಿಕ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ, ಸೂಟೆ ಸಮರ್ಪಣೆ, ವಿಷ್ಣುಮೂರ್ತಿ ದೈವದ ಕೋಲ ನಡೆಯಲಿದೆ. ರಾತ್ರಿ ಕೈವೀದು ನಡೆದು ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

ಸುಮಾರು 60 ವರ್ಷಗಳ‌ ಬಳಿಕ ನಡೆಯುವ ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೈವಗಳ ಕೃಪೆಗೆ ಪಾತ್ರರಾಗುವಂತೆ ಆಡಳಿತ ಮಂಡಳಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು, ಕುಟುಂಬಸ್ಥರು ವಿನಂತಿಸಿದ್ದಾರೆ.

Leave a Comment

Your email address will not be published. Required fields are marked *