ಸಮಗ್ರ ನ್ಯೂಸ್: ಗಾಯವಾದ ಹುಡುಗನಿಗೆ ಹೊಲಿಗೆಯ ಬದಲಾಗಿ ಫೆವಿಕ್ವಿಕ್ ಹಾಕಿರುವ ಘಟನೆ ತೆಲಂಗಾಣದ ಜೋಗುಲಾಂಬ ಗದ್ವಾಲಾ ಜಿಲ್ಲೆಯ ಅಯಿಜಾದಲ್ಲಿ ಈ ಘಟನೆ ನಡೆದಿದೆ. ಬಾಲಕನಿಗೆ ಆ ಆಸ್ಪತ್ರೆ ನೀಡಿದ ಚಿಕಿತ್ಸೆ ಈಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಗಾಯದ ಮೇಲೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿರುವುದಕ್ಕಾಗಿ ಎಲ್ಲರೂ ಕೋಪಗೊಂಡಿದ್ದಾರೆ.
ಸ್ಥಳೀಯರ ಪ್ರಕಾರ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ವಂಶಿಕೃಷ್ಣ ಮತ್ತು ಸುನೀತಾ ದಂಪತಿ ಮಗನನ್ನು ಒಂದು ಮದುವೆಗೆ ಕರೆದುಕೊಂಡು ಹೋಗಿದ್ದರು. ಗದ್ವಾಲ್ ಜಿಲ್ಲೆಯ ಸಂಬಂಧಿಕರ ಮನೆಯಲ್ಲಿ ಮದುವೆ ಇತ್ತು ಗುರುವಾರ ರಾತ್ರಿ ದಂಪತಿ ಪುತ್ರ ಪ್ರವೀಣ್ ಚೌಧರಿ ಆಟವಾಡುವಾಗ ಕೆಳಗೆ ಬಿದ್ದಿದ್ದಾನೆ. ಬಿದ್ದಿರುವುದರಿಂದ ಗಾಯವಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಇದರಿಂದ ಬಾಲಕ ಪ್ರವೀಣ್ ಕಣ್ಣಿಗೆ ಗಂಭೀರ ಗಾಯವಾಗಿದೆ. ಗಾಯದಿಂದ ಆತಂಕಗೊಂಡ ಪೋಷಕರು ಪ್ರವೀಣ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರವೀಣ್ ಅವರ ಗಾಯವನ್ನು ಪರೀಕ್ಷಿಸಿದ ವೈದ್ಯರು ಗಾಯ ಗಂಭೀರವಾಗಿದ್ದು, ಹೊಲಿಗೆ ಹಾಕಬೇಕಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಆಸ್ಪತ್ರೆಯ ಸಿಬ್ಬಂದಿ ಗಾಯಕ್ಕೆ ಹೊಲಿಗೆ ಹಾಕಲು ದಾರದ ಬದಲು ಸಾಮಾನ್ಯವಾಗಿ ಲಭ್ಯವಿರುವ ಫೆವಿಕ್ವಿಕ್ ಬಳಸಿದ್ದಾರೆ ಎಂಬುದು ಆಮೇಲೆ ತಿಳಿದು ಬಂದಿದೆ.
ಚಿಕಿತ್ಸೆ ಬಳಿಕ ಪ್ರವೀಣ್‌ನನ್ನು ಗಮನಿಸಿದ ಬಾಲಕನ ತಂದೆ, ಹೊಲಿಗೆ ಬದಲು ಫೆವಿಕ್ವಿಕ್ ನೀಡಿರುವುದು ಗಮನಕ್ಕೆ ಬಂದಿದೆ. ಆ ನಂತರ ಬಾಲಕನ ತಂದೆ ಇದನ್ನು ಕಂಡು ಕೋಪಗೊಂಡಿದ್ದಾರೆ. ನನ್ನ ಮಗನಿಗೆ ಏನಾದರು ಆದರೆ ನೀವೆ ಜವಾಬ್ಧಾರಿ ನಾನು ಈಗಲೇ ಪೋಲೀಸರಿಗೆ ದೂರು ನೀಡುತ್ತೇನೆ ಎಂದು ಠಾಣೆಗೆ ತೆರಳಿದ್ದಾರೆ. ಅದರಿಂದಾಗಿ ಈ ವಿಷಯ ಬಯಲಿಗೆ ಬಂದಿದೆ.