Ad Widget .

ಪದಕ ಮರಳಿಸಲು ಕುಸ್ತಿಪಟುಗಳ ನಿರ್ಧಾರ| ಅವಮಾನಕ್ಕೆ ಒಳಗಾದ ಬಳಿಕ ಪುರಸ್ಕಾರ ಇಟ್ಟು ಕೊಂಡು ಅರ್ಥವಿಲ್ಲ ಎಂದ ಭಜರಂಗ್

ಸಮಗ್ರ ನ್ಯೂಸ್: ಜಂತರ್‌ ಮಂತರ್‌ನ ಧರಣಿ ಸ್ಥಳದಲ್ಲಿ ಬುಧವಾರ ರಾತ್ರಿ ಘರ್ಷಣೆಯ ವೇಳೆ ಪೊಲೀಸ್ ವರ್ತನೆಯಿಂದ ನೊಂದ ಕುಸ್ತಿಪಟುಗಳಾದ ವಿನೇಶಾ ಫೋಗಟ್ ಹಾಗೂ ಬಜರಂಗ್‌ ಪೂನಿಯಾ ಅವರು ತಮ್ಮ ಪದಕಗಳು ಹಾಗೂ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Ad Widget . Ad Widget .

ಇಂತಹ ಅವಮಾನಕ್ಕೆ ಒಳಗಾದ ಬಳಿಕ ಈ ಗೌರವಗಳನ್ನು ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದೂ ಅವರು ಹೇಳಿದ್ದಾರೆ. ‘ಪೊಲೀಸರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಗೆದ್ದ ಪದಕಗಳಿಗೆ ಬೆಲೆ ಎಲ್ಲಿದೆ. ನಾವು ಸಾಮಾನ್ಯ ಜೀವನ ನಡೆಸುತ್ತೇವೆ. ಎಲ್ಲ ಪದಕ ಹಾಗೂ ಪ್ರಶಸ್ತಿಗಳನ್ನು ಭಾರತ ಸರ್ಕಾರಕ್ಕೆ ಹಿಂತಿರುಗಿಸುತ್ತೇವೆ’ ಎಂದು ಬಜರಂಗ್‌ ಹೇಳಿದರು.

Ad Widget . Ad Widget .

‘ನಾವು ಪದ್ಮಶ್ರೀ ಪುರಸ್ಕೃತರು ಎಂಬುದನ್ನು ಗಮನಿಸದೆಯೇ ಪೊಲೀಸರು ನಮ್ಮನ್ನು ತಳ್ಳಿದರು, ನಿಂದಿಸಿದರು ಮತ್ತು ಕೆಟ್ಟದಾಗಿ ವರ್ತಿಸಿದರು. ಸಾಕ್ಷಿ ಮಲಿಕ್ ಅವರಿಗೂ ಈ ಅನುಭವ ಆಗಿದೆ’ ಎಂದು ಅವರು ತಿಳಿಸಿದರು.

ವಿನೇಶಾ, ಸಾಕ್ಷಿ ಮತ್ತು ಬಜರಂಗ್ ಈ ಮೂವರೂ ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವವಾದ ಖೇಲ್‌ರತ್ನ ಪಡೆದಿದ್ದಾರೆ. 2017ರಲ್ಲಿ ಸಾಕ್ಷಿ ಮತ್ತು 2019ರಲ್ಲಿ ಬಜರಂಗ್ ಅವರು ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

Leave a Comment

Your email address will not be published. Required fields are marked *