ಸಮಗ್ರ ನ್ಯೂಸ್: ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಪಡೆದ ಶಂಖವನ್ನು ಪೂಜೆಯ ಸಮಯದಲ್ಲಿ ಊದುವ ರೂಢಿಯಿದೆ. ಶಂಖನಾದದಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಯಾಗುವುದು. ಶಂಖ ನಮ್ಮ ಆರೋಗ್ಯ, ಧನ ಮುಂತಾದವುಗಳ ಮೇಲೂ ಧನಾತ್ಮಕ ಪ್ರಭಾವ ಬೀರುತ್ತದೆ.
ವಿಷ್ಣು ಮತ್ತು ದೇವಿ ಲಕ್ಷ್ಮಿ ಇಬ್ಬರೂ ಶಂಖವನ್ನು ಧರಿಸಿರುತ್ತಾರೆ. ಅದರಿಂದ ಶಂಖ ಇರುವ ಮನೆಯಲ್ಲಿ ಈ ದೇವತೆಗಳ ಕೃಪೆ ಸದಾ ನೆಲೆಯಾಗಿರುತ್ತದೆ ಎಂದು ನಂಬಲಾಗಿದೆ. ಶುಕ್ರವಾರದ ದಿನ ಲಕ್ಷ್ಮಿಯನ್ನು ಪೂಜಿಸಿ ಶಂಖ ಊದಿದರೆ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ ಎಂಬುದು ಹಿಂದೂ ಧರ್ಮದ ನಂಬಿಕೆ.
ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಶಂಖದ ನೀರನ್ನು ಮನೆಗೆ ಚಿಮುಕಿಸಬೇಕು.
ಶಂಖವನ್ನು ಊದುವುದರಿಂದ ಶ್ವಾಸಕೋಶ ಸದೃಢವಾಗುತ್ತದೆ. ಅಸ್ತಮಾ ರೋಗಿಗಳು ಪ್ರತಿನಿತ್ಯ ಶಂಖ ಊದುವುದರಿಂದ ಅವರ ಆರೋಗ್ಯದಲ್ಲಿ ಯಶಸ್ಸು ಕಾಣಬಹುದು . ಮೂಳೆಗಳ ಸಮಸ್ಯೆ ಇರುವವರು ಶಂಖದ ನೀರನ್ನು ಕುಡಿಯುವುದರಿಂದ ಇದರಲ್ಲಿರುವ ಕ್ಯಾಲ್ಸಿಯಮ್, ಫಾಸ್ಪರಸ್ ಮತ್ತು ಗಂಧಕದ ಅಂಶವು ಮೂಳೆಯನ್ನು ಗಟ್ಟಿಗೊಳಿಸುತ್ತದೆ. ವಾಸ್ತುದೋಷ ನಿವಾರಣೆಯನ್ನೂ ಇದು ಮಾಡುತ್ತದೆ.