ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸಬರ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಹೀಗಿರುವಾಗ ‘ಬೇರ’ ಸಿನಿಮಾ ವಿಭಿನ್ನ ಕಥೆಯನ್ನು ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಹ್ಯಾಟ್ರಿಕ್ ಹೀರೊ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಬೇರ ಚಿತ್ರದ ಟೀಸರ್ ನ್ನು ಬಿಡುಗಡೆಗೊಳಿಸಿದ್ದರು. ಆನಂದ್ ಆಡಿಯೋದಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡ ‘ಬೇರ’ ಟೀಸರ್ ಇದೀಗ ಕೇವಲ 24 ಗಂಟೆಯೊಳಗೆ 8 ಲಕ್ಷ ವೀಕ್ಷಣೆಯೊಂದಿಗೆ ಭಾರೀ ಸದ್ದು ಮಾಡುತ್ತಿದೆ. ಶಿವ ರಾಜ್ಕುಮಾರ್ಸಿನಿಮಾದ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿದೆ.

ಎಸ್‌ಎಲ್‌ವಿ ಕಲರ್ಸ್ ಲಾಂಛನದ, ಕರಾವಳಿ ಮೂಲದ ಉದ್ಯಮಿ ದಿವಾಕರ ದಾಸ್ ನೇರ್ಲಾಜೆ ನಿರ್ಮಾಣದ,ಕಿರುತೆರೆಯ ಹಲವು ಸೂಪರ್ ಹಿಟ್ ಧಾರಾವಾಹಿಗಳ ನಿರ್ದೇಶಕ ವಿನು ಬಳಂಜ ನಿರ್ದೇಶನದ ‘ಬೇರ’ ಸಿನಿಮಾದಲ್ಲಿ ಬಹುಭಾಷ ನಟ ಸುಮನ್ ತಲ್ವಾರ್ ,ಅಂಜಲಿ,

ಹರ್ಷಿಕಾ ಪೂಣಚ್ಚ, ಯಶ್ ಶೆಟ್ಟಿ, ಶೈನ್ ಶೆಟ್ಟಿ, ಹರ್ಷವರ್ಧನ್, ಅರವಿಂದ್ ರಾವ್, ರಾಕೇಶ್ ಮಯ್ಯ, ದತ್ತಣ್ಣ, ಅಶ್ವಿನ್ ಹಾಸನ್, ಸ್ವರಾಜ್ ಶೆಟ್ಟಿ, ಮಂಜುನಾಥ್ ಹೆಗ್ಡೆ, ಎಂ ಕೆ ಮಠ
ಚಿತ್ಕಲ ಬಿರಾದಾರ್, ಶೋಭರಾಣಿ, ಶಾಂತಲಾ ಕಾಮತ್
ದೀಪಕ್ ರೈ ಪಾಣಾಜೆ, ಗುರು ಹೆಗ್ಡೆ
ಸಬಿತ ಕಾಮತ್, ಧವಳ್, ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್
ರಾಮದಾಸ್ ಶೆಟ್ಟಿ, ಡಿಒಪಿ
ರಾಜಶೇಖರ ರಮಾತ್ನಲ್, ಮ್ಯೂಸಿಕ್
ಮಣಿಕಾಂತ್ ಕದ್ರಿ, ಎಡಿಟಿಂಗ್
ಶ್ರೀಕಾಂತ್, ಕೋ ಡೈರೆಕ್ಟರ್
ಸುಭಾಷ್ ಅರ್ವ ಇವರೆಲ್ಲರ ಸಹಕಾರದಲ್ಲಿ ಬೇರ ಸಿನಿಮಾ ಅತೀ ಶೀಘ್ರದಲ್ಲಿ ತೆರೆ ಕಾಣಲಿದೆ.
