Ad Widget .

ನಟ ಶರತ್ ಬಾಬು ಆರೋಗ್ಯ ಸ್ಥಿರ| ವದಂತಿಗಳನ್ನು ನಂಬದಂತೆ ಕುಟುಂಬಸ್ಥರ ಮನವಿ

ಸಮಗ್ರ ನ್ಯೂಸ್: ಶರತ್ ಬಾಬು ಇನ್ನಿಲ್ಲ ಎಂಬ ಎಲ್ಲಾ ವರದಿಗಳನ್ನ ನಟನ ಸಹೋದರಿ ತಳ್ಳಿಹಾಕಿದ್ದು, ವದಂತಿಗಳನ್ನು ನಂಬದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Ad Widget . Ad Widget .

ಶರತ್ ಬಾಬು ಆರೋಗ್ಯದ ಕುರಿತು ಹೇಳಿಕೆ ನೀಡಿರುವ ಕುಟುಂಬ, ಹಿರಿಯ ನಟನ ಆರೋಗ್ಯ ಸ್ಥಿರವಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಂಡು ಮನೆಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ.

Ad Widget . Ad Widget .

ಶರತ್ ಬಾಬು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೊದಲಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದ ಶರತ್ ಬಾಬು ಅವರನ್ನು ನಂತರ ಹೈದ್ರಾಬಾದ್’ನ ಎಐಜಿ ಆಸ್ಪತ್ರೆಗೆ ರವಾನಿಸಲಾಗಿತ್ತು.

ಸದ್ಯ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಅವರ ಆರೋಗ್ಯದ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಶರತ್ ಬಾಬು ಅವರ ಆರೋಗ್ಯ ಹದಗೆಟ್ಟಿದೆ ಎಂದು ಮೊದಲ ವರದಿಗಳು ಬಂದಿದ್ದವು. ಆ ನಂತರ ಅವರು ನಿಧನರಾದರು ಎಂಬ ಸುದ್ದಿ ಬಂತು. ಸಾಮಾಜಿಕ ಮಾಧ್ಯಮದ ಜೊತೆಗೆ, ಅನೇಕ ಯೂಟ್ಯೂಬ್ ಚಾನಲ್‌ಗಳು ಮತ್ತು ಜನಪ್ರಿಯ ವೆಬ್‌ಸೈಟ್‌ಗಳು ಸಹ ಈ ರೀತಿಯ ಸ್ಟೋರಿಗಳನ್ನ ಬಿತ್ತರಿಸಿದವು. ಇದನ್ನು ಅವರ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಇದು ನಿಜ ಎಂದು ಭಾವಿಸಿ, ದುಃಖಿತರಾಗಿದ್ದರು.

Leave a Comment

Your email address will not be published. Required fields are marked *