ಸಮಗ್ರ ನ್ಯೂಸ್: ‘ದಿ ಕೇರಳ ಸ್ಟೋರಿ’ ಟ್ರೈಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ದಿ ಕೇರಳ ಸ್ಟೋರಿ ಕೇರಳದ ಸುಮಾರ 36 ಸಾವಿರ ಹುಡುಗಿಯರ ನಾಪತ್ತೆಯನ್ನು ಈ ಸಿನಿಮಾದಲ್ಲಿ ತೋರಿಸಲು ಹೊರಟಿದ್ದು, ವಿದೇಶದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಮತಾಂತರ ಮತ್ತು ಐಸಿಸ್ ಉಗ್ರಗಾಮಿಗಳನ್ನು ಆಗಿಸುವ ವಿಷಯವನ್ನು ಈ ಸಿನಿಮಾ ಒಳಗೊಂಡಿದೆ.
ದಿ ಕೇರಳ ಸ್ಟೋರಿ ಟೀಸರ್ ಈ ಹಿಂದಿ ರಿಲೀಸ್ ಆಗಿದ್ದು, ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕೇರಳದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಲಾಗಿದೆ . ಇನ್ನು ಟೀಸರ್‌ನಲ್ಲಿ ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಎಂಬ ಸಂಭಾಷಣೆ ಇದ್ದು ಈ ಮಾತು ವಿವಾದಕ್ಕೀಡಾಗಿತ್ತು.
ಈ ನಡುವೆ ಕೇರಳ ಸ್ಟೋರಿ ಸಿನಿಮಾ ದ್ವೇಷ ಭಾಷಣ ಮತ್ತು ಇದೊಂದು ದೃಶ್ಯ ಮತ್ತು ಶ್ರಾವ್ಯ ಪ್ರಚಾರ ಹುಚ್ಚು ಹೊಂದಿದೆ. ಕೋಮು ಸೌಹಾರ್ದತೆಯನ್ನು ಕೆಡಿಸಲಿದೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಬ್ರೇಕ್ ಹಾಕಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಮೇ 5 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಅದಕ್ಕೆ ಶೀಘ್ರವೇ ತಡೆ ನೀಡಬೇಕು ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ವಕೀಲ ನಿಜಾಮ್ ಪಾಷಾ ಅವರು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ಪೀಠದ ಮುಂದೆ ಮನವಿ ಮಾಡಿದರು. ಸಿನಿಮಾವು ಅತ್ಯಂತ ಕೆಟ್ಟ ರೀತಿಯ ದ್ವೇಷದ ಭಾಷಣವನ್ನು ಹೊಂದಿದೆ. ಇದು ಸಂಪೂರ್ಣವಾಗಿ ಪ್ರಚಾರದ ಕಾರಣಕ್ಕಾಗಿ ನಿರ್ಮಿಸಲಾಗಿದೆ ಎಂದು ವಕೀಲ ಪಾಷಾ ಅವರು ವಾದಿಸಿದರು.
ಯಾವುದೇ ಅರ್ಜಿಗಳು ಬಂದರೂ ಸ್ವೀಕರಿಸಲು ಇದು ಆಟದ ಮೈದಾನವಲ್ಲ. ಯಾವುದೇ ಪ್ರಕರಣದ ವಿರುದ್ಧ ತಕರಾರು ಇದ್ದಲ್ಲಿ ವ್ಯವಸ್ಥಿತವಾಗಿ ಅರ್ಜಿ ಸಲ್ಲಿಸಬೇಕು. ಇದನ್ನು ನಾವೀಗ ಪರಿಗಣಿಸಿದರೆ, ಎಲ್ಲರೂ ಸುಪ್ರೀಂ ಕೋರ್ಟ್‌ಗೆ ಬರಲು ಪ್ರಾರಂಭಿಸುತ್ತಾರೆ” ಎಂದು ಹೇಳಿತು.
ತುರ್ತು ಅಗತ್ಯದ ಕಾರಣ ದ್ವೇಷ ಭಾಷಣದ ಆಧಾರದ ಮೇಲೆ ಅರ್ಜಿ ಸಲ್ಲಿಸಲಾಗಿದೆ ಎಂದು ವಕೀಲ ಪಾಷಾ ಹೇಳಿದರು. ಈ ವೇಳೆ ನ್ಯಾಯಮೂರ್ತಿ ಜೋಸೆಫ್ ಅವರು ಅರ್ಜಿಯನ್ನು ಸ್ವೀಕರಿಸಲು ಒಪ್ಪದಿದ್ದರೂ, ಇದರ ವಿರುದ್ಧ ರಿಟ್ ಅರ್ಜಿಯನ್ನು ಸಲ್ಲಿಸುವ ಅಗತ್ಯವಿದೆ ಎಂದು ಹೇಳಿದರು.