ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಪ್ರಚಾರದ ಮಟ್ಟ ಕುಸಿಯುತ್ತಿರುವುದನ್ನು ಚುನಾವಣಾ ಆಯೋಗ ಮಂಗಳವಾರ ಗಂಭೀರವಾಗಿ ಪರಿಗಣಿಸಿದೆ ಮತ್ತು ಸಂಯಮದಿಂದ ವರ್ತಿಸುವಂತೆ ಪಕ್ಷಗಳಿಗೆ ಸೂಚಿಸಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದ ಮಟ್ಟ ಕುಸಿಯುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಕರ್ನಾಟಕದ ರಾಜಕೀಯ ಪಕ್ಷಗಳಿಗೆ ‘ತಮ್ಮ ಹೇಳಿಕೆಗಳಲ್ಲಿ ಎಚ್ಚರಿಕೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳಿ’ ಎಂದು ಖಡಕ್ ಸೂಚನೆ ನೀಡಿದೆ.
ಮೇ.10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಮತದಾನ ಸಮೀಪಿಸುತ್ತಿದ್ದಂತೆ, ಕರ್ನಾಟಕದಲ್ಲಿ ಪಕ್ಷಗಳ ನಾಯಕರು, ಸ್ಟಾರ್ ಪ್ರಚಾರಕರು ಹದ್ದುಮೀರಿದ ನಡೆಯನ್ನು ಹಲವೆಡೆ ತೋರುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಸಂಯಮದಿಂದಿರಿ ಎಂಬುದಾಗಿ ಎಲ್ಲಾ ಪಕ್ಷದ ನಾಯಕರು, ಸ್ಟಾರ್ ಪ್ರಚಾರಕರಿಗೆ ಚುನಾವಣಾ ಆಯೋಗವು ಖಡಕ್ ಸೂಚನೆಯನ್ನು ನೀಡಿದೆ.