Ad Widget .

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಉಲ್ಲೇಖಕ್ಕೆ ಸುಳ್ಯ ಬಿಜೆಪಿ ಮಂಡಲ ಖಂಡನೆ

ಸಮಗ್ರ ನ್ಯೂಸ್: ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಹೊರತಂದ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಭಜರಂಗದಳವನ್ನು ನಿಷೇಧಿಸುತ್ತೇವೆ ಎಂಬುದನ್ನು ಸುಳ್ಯ ಮಂಡಲ ಭಾರತೀಯ ಜನತಾ ಪಾರ್ಟಿ ಖಂಡಿಸಿದೆ. ಈ ಬಗ್ಗೆ ಮಂಡಲದ ವತಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಪಡೆಯುವ ಹಗಲು ಕನಸು ಕಾಣುತ್ತಿರುವ ಕಾಂಗ್ರೆಸ್ ಒಲೈಕೆ ರಾಜಕರಣದ ಭಾಗವಾಗಿ ತಾವು ಅಧಿಕಾರಕ್ಕೆ ಬಂದಲ್ಲಿ ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವುದನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಈ ಭರವಸೆಯನ್ನು ಪ್ರಣಾಳಿಕೆಯಿಂದ ಹಿಂಪಡೆಯುವನಮತೆ ಆಗ್ರಹಿಸಿದೆ.

Ad Widget . Ad Widget . Ad Widget .

ರಾಷ್ಟ್ರ ಕಾರ್ಯ, ಮಾತೆಯರ ರಕ್ಷಣೆ, ಗೋಮಾತೆ ರಕ್ಷಣೆ, ಹಿಂದುತ್ವದ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ದೇಶಭಕ್ತರ ಸಂಘಟನೆ ಭಜರಂಗದಳ. ಕೊರೊನಾ, ಪಾಕೃತಿಕ ವಿಕೋಪಾದಂತಹ ಸಂದರ್ಭದಲ್ಲಿ ವಿಶೇಷವಾದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈ ರಾಷ್ಟ್ರದ ಹೆಮ್ಮೆಯ ಸಂಘಟನೆ ಭಜರಂಗದಳವನ್ನು ರಾಷ್ಟ್ರದ್ರೋಹಿ ಸಂಘಟನೆ ಪಿಎಫ್‌ಐ ಜೊತೆ ಹೋಲಿಸಿ, ನಿಷೇಧಿಸುವಂತಹ ಕಾಂಗ್ರೆಸ್‌ನ ನೀಚ ಮನಸ್ಥಿತಿ ಕಾಂಗ್ರೆಸ್‌ನ ಅವನತಿಗೆ ಕಾರಣವಾಗಲಿದೆ. ಹಿಂದೂ ವಿರೋಧಿ ಕಾಂಗ್ರೆಸ್‌ಗೆ ಹಿಂದುಗಳ ಮತವನ್ನು ಕೇಳುವ ನೈತಿಕತೆಯೇ ಇಲ್ಲ.

ಕಾಂಗ್ರೆಸ್ ಶವಪೆಟ್ಟಿಗೆ ಮೇ ೧೦ರಂದು ಅಂತಿಮ ಮೊಳೆ ಬೀಳಲು ಡಿಕೆಶಿ ಮತ್ತು ಸಿದ್ಧರಾಮಯ್ಯರವರ ಈ ರೀತಿಯ ಮನಸ್ಥಿತಿ ಕಾರಣವಾಗಲಿದೆ. ಭಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಯ ಎಲ್ಲಾ ಕಾರ್ಯಕರ್ತರೊಡನೆ ಭಾರತೀತ ಜನತಾ ಪಾರ್ಟಿ ಇನ್ನೂ ಮುಂದೆಯೂ ಬೆಂಬಲವಾಗಿ ನಿಲ್ಲಲಿದೆ ಎಂದು ಸುಳ್ಯ ಮಂಡಲ ಬಿಜೆಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment

Your email address will not be published. Required fields are marked *