Ad Widget .

ರಾಮನ ಬಳಿಕ ರಾಮಭಂಟನನ್ನೂ ಬಂಧಿಸಿಡುವ ಹುನ್ನಾರ| ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ಗುಡುಗಿದ ಪ್ರಧಾನಿ

ಸಮಗ್ರ ನ್ಯೂಸ್: ಕಾಂಗ್ರೆಸ್ ಈ ಹಿಂದೆ ಶ್ರೀರಾಮಚಂದ್ರನ ಬಂಧಿಸಿಟ್ಟಿತು. ಇದೀಗ ಹುನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Ad Widget . Ad Widget .

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಭಜರಂಗದಳ ನಿಷೇಧಿಸುವುದಾಗಿ ಘೋಷಿಸಿದೆ. ಇದರ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಶ್ರೀರಾಮಚಂದ್ರ ಹಾಗೂ ಹನುಮಾನ್ ನಮಗೆ ಪೂಜ್ಯ ಎಂದಿದ್ದಾರೆ. ವಿಜಯನಗರದಲ್ಲಿ ಆಯೋಜಿಸಿದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.

Ad Widget . Ad Widget .

ಹನುಮಾನ ಜನ್ಮಸ್ಥಾನಕ್ಕೆ ಬಂದಿದ್ದೇನೆ. ನಾನು ಹನುಮಂತನಿಗೆ ಶತ ಪ್ರಣಾಮ ಮಾಡುತ್ತಿದ್ದೇನೆ. ಆದರೆ ಇದೇ ಸಮಯದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗಬಲಿ ಅಂದರೆ ಹನುಮಂತನನ್ನ ಬೀಗ ಹಾಕಿ ಬಂಧಿಸಲು ಹೊರಟಿದ್ದಾರೆ. ಈ ಹಿಂದೆ ಕಾಂಗ್ರೆಸ್ ಶ್ರೀರಾಮಚಂದ್ರನನ್ನು ಬಂಧಿಸಿಟ್ಟಿದ್ದರು. ಅವರಿಗೆ ಈ ಹಿಂದೆ ಶ್ರೀರಾಮ ಕಂಡರೂ ಆಗುತ್ತಿಲ್ಲ. ಇದೀಗ ಹನುಮಂತನ ಕಂಡರೂ ಆಗುತ್ತಿಲ್ಲ. ನಮಗೆ ಶ್ರೀರಾಮ ಚಂದ್ರ ಹಾಗೂ ಹನುಮಂತ ಪೂಜ್ಯ. ಇಡೀ ದೇಶದಲ್ಲಿ ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿ ಮಾಡಲು ನಾವು ಸಂಕಲ್ಪ ಬದ್ಧರಾಗಿದ್ದೇವೆ. ನಮ್ಮ ಈ ಸಂಕಲ್ಪಕ್ಕೆ ಹನುಮಂತನ ಆಶೀರ್ವಾದ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಮೋದಿ ಹೇಳಿದ್ದಾರೆ.

Leave a Comment

Your email address will not be published. Required fields are marked *