Ad Widget .

ಲಕ್ನೋ ವಿರುದ್ಧ ಗೆದ್ದು ಬೀಗಿದ ಆರ್ ಸಿಬಿ| 18 ರನ್ ಗಳ ರೋಚಕ ಜಯ

ಸಮಗ್ರ ನ್ಯೂಸ್: ಐಪಿಎಲ್ 2023 ರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ. ಇದರೊಂದಿಗೆ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಂತಾಗಿದೆ.

Ad Widget . Ad Widget .

ಈ ಆಟದಲ್ಲಿ ಬೌಲರ್ ಗಳದ್ದೇ ಮೇಲುಗೈ. ಬ್ಯಾಟಿಗರು ರನ್ ಗಳಿಸಲು ಪರದಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು. ಫಾ ಡು ಪ್ಲೆಸಿಸ್ 44 ರನ್, ವಿರಾಟ್ ಕೊಹ್ಲಿ 31 ರನ್ ಗಳಿಸಿದರು.

Ad Widget . Ad Widget .

ಈ ಮೊತ್ತವನ್ನು ಲಕ್ನೋ ಸುಲಭವಾಗಿ ಬೆನ್ನತ್ತಬಹುದು ಎಂದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಲಕ್ನೋ ಬ್ಯಾಟಿಗರು ಸಂಪೂರ್ಣ ಪರದಾಡಿದರು. ಅಂತಿಮವಾಗಿ ಲಕ್ನೋ 19.5 ಓವರ್ ಗಳಲ್ಲಿ 108 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

Leave a Comment

Your email address will not be published. Required fields are marked *